ಮಸಣ ಕಾರ್ಮಿಕರನ್ನು ಪಂಚಾಯತಿ ನೌಕರರೆಂದು ಪರಿಗಣಿಸಿ

IMG-20241218-WA0015
Published on

ರಾಯಚೂರು: ಮಸಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದಿಂದ ಯರಗೇರಾ ಗ್ರಾಮ ಪಂಚಾಯತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿ ಸಾರ್ವಜನಿಕ ಮಸಣಕ್ಕೆ ಒಬ್ಬರಂತೆ ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ಮಸಣ ನಿರ್ವಹಕರಾನ್ನಾಗಿ ನೇಮಿಸಕೊಳ್ಳಬೇಕು. ಅದೇ ರೀತಿ ಎಲ್ಲ ಮಸಣಗಳಲ್ಲಿ ಪಾರಂಪರಿಕವಾಗಿ ಕಾರ್ಯನಿರ್ವಹಿಸುವ ಮಸಣ ಕಾರ್ಮಿಕರ ಕುಟುಂಬಗಳ ಗಣತಿ ಮಾಡಬೇಕು. ಪ್ರತಿ ಕುಣಿ ಹಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪರಿಗಣಿಸಿ ಪ್ರತಿ ಕುಣಿಗೆ ಕನಿಷ್ಠ 3,000 ರೂ.ಯಂತೆ ಕೂಲಿಯನ್ನು ಪಂಚಾಯತಿಯಿಂದ ಪಾವತಿಸಬೇಕು ಎಂದು ಒತ್ತಾಯಿಸಲಾಯಿತು.

ಮಸಣ ಕಾರ್ಮಿಕರಿಗೆ ಮಸಣದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು, ಕುಣಿ ಹಗೆಯಲು ಅಗತ್ಯವಿರುವ ಪರಿಕರಗಳನ್ನು ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನದಲ್ಲಿ ಪಂಚಾಯತಿಯಿಂದ ನೀಡಬೇಕು. ಯರಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೋಡಿಹಾಳ ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿಗೆ ಭೂ ಮಂಜೂರಾತಿ ನೀಡಬೇಕು. ಈಗಾಗಲೇ ಪಂಚಾಯತಿ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಇರುವ ಸಾರ್ವಜನಿಕ ಮಸಣಗಳಿಗೆ ಕಂಪೌಡ್ ನಿರ್ಮಾಣ ಮತ್ತು ಬೋರ್‌ವೇಲ್ ಹಾಕಬೇಕು ಜೊತೆಗೆ ಪರಿಕರಗಳನ್ನು ಇಡಲು ಸ್ಟೋರ್ ರೂಂಗಳನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಜಿ.ವಿರೇಶ, ಈ.ರಂಗನಗೌಡ, ತಿಪ್ಪಯ್ಯ, ಈರೇಶ, ನಲ್ಲರೆಡ್ಡಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net