ಸ್ವಾವಲಂಬಿ ಜೀವನ ನಡೆಸಲು ನೆರವು ಶ್ಲಾಘನೀಯ

22082022 mnv
Published on

ಮಾನ್ವಿ: ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿಯವರು ಎಲ್ಲ ಸಮುದಾಯಗಳ ಮಹಿಳೆಯರಿಗೆ ಟೈಲರಿಂಗ್, ಮೆಹಂದಿ, ಕಂಪ್ಯೂಟರ್ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತಿರುವುದು ಶ್ಲಾಘನೀಯ. ಎಲ್ಲರೂ ಇದರ ಸೌಲಭ್ಯ ಪಡೆಯುವಂತೆ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಖಾದ್ರಿಯಾ ಫಂಕ್ಷನ್ ಹಾಲ್‌ನಲ್ಲಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿ ಭಾನುವಾರ ಹಮ್ಮಿಕೊಂಡಿದ್ದ ಜನಸೇವೆ ಖಿದ್ಮತೆ ಖಲಖ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯಿಂದ ನಡೆಯುವ ತರಬೇತಿಯಲ್ಲಿ ಉತ್ತಿರ್ಣಾರಾದ ಆಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಹಾಗೂ ಹೋಲಿಗೆ ಯಂತ್ರವನ್ನು ವಿತರಣೆ ಮಾಡಲಾಗುತ್ತಿದ್ದು, ಇದರಿಂದ ಅನುಕೂಲವಾಗಲಿದೆ ಎಂದರು.
ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮುಫ್ತಿ ಮೆಹರಾಜ್ ಅಹಮದ್ ಖಾದ್ರಿ ನಿಜಾಮಿಯಾ, ಜಿಲ್ಲಾ ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ ಪಡೆದ ಸೈಯದ್ ಅಬ್ದುಲ್ ಗಯಾಸ್ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಗುತ್ತಿಗೆದಾರ ಸೈಯದ್ ಅಕ್ಬರ್ ಸಾಬ್, ದಲಿತ ಮುಖಂಡ ಬಾಲಸ್ವಾಮಿ ಕೊಡ್ಲಿ, ಎಂ.ಈರಣ್ಣ, ಸಂಸ್ಥೆಯ ಅಧ್ಯಕ್ಷ ಸೈಯದ್ ಆರಿಫುಲ್ಲಾ ಖಾದ್ರಿ, ಸಹಾಯಕ ಪ್ರಾಧ್ಯಾಪಕ ಸೈಯದ್ ಮಿನ್ಹಾಜ್ ಉಲ್ ಹಸನ್, ಸೈಯದ್ ಖಾಲೀದ್ ಖಾದ್ರಿ ಗುರು, ಸೈಯದ್ ಬಾಬಾ ಜಾಗಿರ್‌ದಾರ್, ಸೈಯಾದ್ ಖಲೀಲುಲ್ಲಾ ಖಾದ್ರಿ ಖಾಜಿ, ಸೈಯದ್ ಹುಸೇನ್ ಬಾಷಾ, ಸೈಯದ್ ಜಾವಿದ್ ಹಾಶಿಮಿ, ಫಾರೂಖ್ ಅಹಮ್ಮದ್ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net