ಹರಿದಾಸ ಮ್ಯೂಸಿಯಂ ಪ್ರಶಂಸಿಸಿದ ಸುಧಾಮೂರ್ತಿ

06092021 Mantralayam Sudhamurthy Visit
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಸೋಮವಾರ ಭೇಟಿ ನೀಡಿ ಶ್ರೀ ಗುರುರಾಯರ ವೃಂದಾವನ ದರ್ಶನ ಪಡೆದರು.

ನಂತರ ಶ್ರೀಮಠದಿಂದ ಪ್ರಾರಂಭಿಸಲಾಗಿರುವ ಹರಿದಾಸ ಮ್ಯೂಸಿಯಂಗೆ ವೀಕ್ಷಿಸಿ, ಹರಿದಾಸರ ಜೀವನ ಮತ್ತು ಸಾಧನೆ ಕುರಿತ ಮಾಹಿತಿಯನ್ನು ಸಮರ್ಪಕವಾಗಿ ನೀಡಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸುಧಾಮೂರ್ತಿಯನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸನ್ಮಾನಿಸಿ, ಆಶೀರ್ವದಿಸಿದರು. ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net