

ರಾಯಚೂರು/ಮಂತ್ರಾಲಯ: ಆಷಾಢ ಶುಧ ಗುರುಪೂರ್ಣಿಮಾ ಅಂಗವಾಗಿ ಮಂತ್ರಾಲಯದಲ್ಲಿ ಮೃತ್ತಿಕಾ ಸಂಗ್ರಹಣಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು.
ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ತುಳಸಿವನಕ್ಕೆ ಭವ್ಯ ಮೆರವಣಿಗೆಯಲ್ಲಿ ಭೇಟಿ ನೀಡಿದರು. ನಂತರ ಮೃತ್ತಿಕಾ ಸಂಗ್ರಹಣಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಇದನ್ನೂ ಓದಿ: ಕಾರ್ಗಿಲ್ ಕಲಶ ಯಾತ್ರೆ ಮಂತ್ರಾಲಯಕ್ಕೆ
ಮಠ ಮತ್ತು ತುಂಗಭದ್ರಾ ನದಿಯ ನಡುವೆ ಇರುವ ತುಳಸಿ ವನ(ಉದ್ಯಾನ)ದಿಂದ ಮೃತ್ತಿಕಾವನ್ನು ಸಂಗ್ರಹಿಸಿದರು. ಈ ಮೃತ್ತಿಕಾವನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರ ಸನ್ನಿದಾನಕ್ಕೆ ಸುವರ್ಣ ಪಲ್ಲಕಿಯಲ್ಲಿ ತಂದು ಬೃಂದಾವನದ ಮೇಲ್ಭಾಗದಲ್ಲಿ ಇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಸಿಬ್ಬಂದಿ ಉಪಸ್ಥಿತರಿದ್ದರು.