ಮಂತ್ರಾಲಯದಲ್ಲಿ ಶಾಂತಿ ಹೋಮ

21062020 Mantralaya Shanti Homa
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಯಜ್ಞ ಮಂಟಪದಲ್ಲಿ ಭಾನುವಾರ ಗ್ರಹಣ ನಿಮಿತ್ತ ಶಾಂತಿ, ನವಗ್ರಹ, ನರಸಿಂಹ ಮತ್ತು ಗಾಯಿತ್ರಿ ಹೋಮಗಳನ್ನು ನೆರವೇರಿಸಲಾಯಿತು.

ಶ್ರೀಮಠದ ಪೀಠಾಧಿಪತಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದರು. ನಂತರ ಮಾತನಾಡಿ, ವಿಶ್ವದಲ್ಲಿ ಕರೊನಾ ದೂರಾಗಲಿ ಗ್ರಹಣ ದೋಷ ನಿವಾರಣೆಯಾಗಿ ಸುಖ, ಸಾಂತಿ, ನೆಮ್ಮದಿ ನೆಲೆಸಲಿ ಎಂದು ಹೋಮ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು. ಗ್ರಹಣ ನಿಮಿತ್ತ ಶ್ರೀಮಠದ ಆವರಣವನ್ನು ಶುಚಿಗೊಳಿಸಿ, ರಾಯರ ಮೂಲ ಬೃಂದಾವನಕ್ಕೆ ಅಭಿಷೇಷಕ ನೆರವೇರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದೂ ಸೇರಿ ವಿವಿಧ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net