ರಾಯರ ಮಠಕ್ಕೆ 2.94 ಕೋಟಿ ಆದಾಯ

HUNDI ENIKE
Published on

ರಾಯಚೂರು: ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 2.94 ಕೋಟಿ ರೂ.ಸಂಗ್ರಹವಾಗಿದೆ.

ಸೆಪ್ಟಂಬರ್ ತಿಂಗಳ ಅಂತ್ಯಕ್ಕೆ ಶ್ರೀಮಠದ ಅಧಿಕಾರಿಗಳು ಮಂಗಳವಾರ 28 ದಿನಗಳ ಹುಂಡಿ ಎಣಿಕೆ ಕಾರ್ಯ ನಡೆಸಿದ್ದು, 2,94,57,810 ರೂ. ಸಂಗ್ರಹವಾಗಿದೆ.
ಇದಲ್ಲದೇ ಹರಕೆ ರೂಪದಲ್ಲಿ ಭಕ್ತರು 70.500 ಗ್ರಾಮ ಚಿನ್ನ, 1 ಕೆ.ಜಿ 240 ಗ್ರಾಂ ಬೆಳ್ಳಿ ರಾಯರಿಗೆ ಸಮರ್ಪಿಸಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net