ಡಾ.ಸುಬುಧೇಂದ್ರ ತೀರ್ಥರ ಪೀಠಾರೋಹಣ ದಶಮಾನೋತ್ಸವ ಇಂದಿನಿಂದ

Gvt = Mantralaya 01
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಪೀಠಾರೋಹಣದ ದಶಮಾನೋತ್ಸವ ಕಾರ್ಯಕ್ರಮ ನಗರದಲ್ಲಿ ಮಾ.15 ರಿಂದ 17ರವರೆಗೆ ಹಮ್ಮಿಕೊಳ್ಳಲಾಗಿದೆ.

ಮಾ.15ರಂದು ಎನ್‌ಜಿಒ ಕಾಲನಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬೆಳಗ್ಗೆ 9ಕ್ಕೆ ಸಾಮೂಹಿಕ ಪಾದಪೂಜೆ, ಮುದ್ರಾಧಾರಣೆ, ಬೆಳಗ್ಗೆ 10.30ಕ್ಕೆ ದಶಹೋಮಗಳ ಪೂರ್ಣಾಹುತಿ ಹಾಗೂ ಅವಬೃಥ ಸ್ನಾನ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಸಾವಿತ್ರಿ ಕಾಲನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀಗಳಿಗೆ ತುಲಾಭಾರ ನಡೆಸಲಾಗುವುದು.

ಮಾ.16ರಂದು ಬೆಳಗ್ಗೆ 9ಕ್ಕೆ ದೇವರು ಕಾಲನಿಯಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಹಾಗೂ ಬೆಳಗ್ಗೆ 10ಕ್ಕೆ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಸಾಮೂಹಿಕ ಪಾದಪೂಜೆ, ಮುದ್ರಾಧಾರಣೆ ನಡೆಯಲಿದೆ. ಸಂಜೆ 5.30ಕ್ಕೆ ಶ್ರೀಗಳಿಗೆ ತುಲಾಭಾರ ನಡೆಯಲಿದೆ. ಮಾ.17ರಂದು ಬೆಳಗ್ಗೆ 9ಕ್ಕೆ ಕೃಷ್ಣದೇವರಾಯ ಕಾಲನಿ, ಬೆಳಗ್ಗೆ 10ಕ್ಕೆ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಪಾದಪೂಜೆ, ಮುದ್ರಾಧಾರಣೆ, ಸಂಜೆ 4ಕ್ಕೆ ಶ್ರೀ ಸುಶಮೀಂದ್ರ ವೃತ್ತದಿಂದ ಜೋಡು ವೀರಾಂಜಿನೇಯ ದೇವಸ್ಥಾನದವರೆಗೆ ಡಾ.ಸುಬುಧೇಂದ್ರ ತೀರ್ಥರ ಶೋಭಾಯಾತ್ರೆ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net