ಆಶ್ರಮ ಶಾಲೆಯಲ್ಲಿ ಕುಡಿವ ನೀರಿನ ಸಂಕಷ್ಟ; ಒಂದು ವರ್ಷದಿಂದ ಸಮಸ್ಯೆ ಟ್ಯಾಂಕರ್ ಮೂಲಕ ಸರಬರಾಜು

raichur valmiki Asrama school
ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯ ಹೊರನೋಟ.
Published on


ರಾಯಚೂರು: ಸುಸಜ್ಜಿತ ಕಟ್ಟಡ, ತರಗತಿಯ ಉತ್ತಮ ಕೊಠಡಿಗಳು, ವಿದ್ಯುತ್ ವ್ಯವಸ್ಥೆ ಸೇರಿ ಎಲ್ಲ ಸೌಲಭ್ಯಗಳಿದ್ದರೂ ತಾಲೂಕಿನ ಗಿಲ್ಲೆಸುಗೂರಿನಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವ ಸ್ಥಿತಿಯಿದೆ.

ಒಂದು ವರ್ಷದ ಹಿಂದೆ ಆಶ್ರಮ ಶಾಲೆಯನ್ನು ಆರಂಭಿಸಲಾಗಿದೆ. ಆರಂಭದಿಂದಲೂ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿವ ನೀರು, ಸ್ನಾನ, ಅಡುಗೆಗಾಗಿ ಟ್ಯಾಂಕರ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಶಾಲೆಯಲ್ಲಿ ಒಂದರಿಂದ 5ನೇ ತರಗತಿವರೆಗೆ 105 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳಿಗಾಗಿ 11 ಕೊಠಡಿ, ಊಟದ ಹಾಲ್, ದಾಸ್ತಾನು ಕೊಠಡಿ, 8 ತರಗತಿ ಕೊಠಡಿ ಹಾಗೂ ವಾರ್ಡನ್‌ಗೆ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದ್ದರೂ ವಿಫಲವಾಗಿದೆ. ಶಾಲೆಯಲ್ಲಿ ಪ್ರತ್ಯೇಕ ಕೊಳವೆಬಾವಿ ಕೊರೆಯಿಸಿ ನೀರಿನ ಸಮಸ್ಯೆ ನಿವಾರಣೆ ಮಾಡಬೇಕಾಗಿದೆ.

ಗಿಲ್ಲೆಸುಗೂರಿನ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಹಲವು ಕೊಳವೆಬಾವಿ ಕೊರೆಯಿಸಲಾಗಿದ್ದರೂ ವಿಫಲವಾಗಿವೆ. ಇದರಿಂದಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೊಸ ಕೊಳವೆ ಬಾವಿ ಕೊರೆಯಿಸಲು ನೀರಿನ ಮೂಲದ ಪರಿಶೀಲನೆ ನಡೆಸಲಾಗುತ್ತಿದೆ.|ರಾಜೇಂದ್ರ ಜಲ್ದಾರ್ ಜಿಲ್ಲಾ ಅಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರಾಯಚೂರು

ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ನೀರಿಗಾಗಿ ಪರದಾಡುವಂತಾಗುವಂತಾಗಿದೆ. ಶಾಲೆಯಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು.| ರಘುವೀರ ನಾಯಕ ವಿಭಾಗೀಯ ಕಾರ್ಯದರ್ಶಿ, ಹೈ.ಕ. ಪ್ರದೇಶ ವಾಲ್ಮೀಕಿ ನಾಯಕ ಸಂಘ, ರಾಯಚೂರು (ಫೋಟೊ ಇದೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net