ಮಹಾರಾಷ್ಟ್ರ ಚುನಾವಣೆಗೆ ಜಿಲ್ಲೆಯ ಮೂವರು ಸಂಯೋಜಕರು

Published on

ರಾಯಚೂರು: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಸಂಯೋಜಕರನ್ನಾಗಿ ಜಿಲ್ಲೆಯ ಮೂವರು ಕಾಂಗ್ರೆಸ್ ಪ್ರಮುಖರನ್ನು ನೇಮಕ ಮಾಡಲಾಗಿದೆ.

ಮಹಾರಾಷ್ಟ್ರದ ಅಕ್ಕಲಕೋಟ್ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ, ನಿಲಂಗಾ ಕ್ಷೇತ್ರಕ್ಕೆ ರಾಜ್ಯ ವಕ್ತಾರ ರಝಾಕ್ ಉಸ್ತಾದ್ ಹಾಗೂ ಲಾತೂರ್ ಗ್ರಾಮೀಣ ಕ್ಷೇತ್ರಕ್ಕೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಸ್ಲಾಂ ಪಾಷಾರನ್ನು ನೇಮಕ ಮಾಡಿ ಎಐಸಿಸಿ ರಾಷ್ಟ್ರೀಯ ವಾರ್‌ರೂಮ್ ಅಧ್ಯಕ್ಷ ಹಾಗೂ ಸಂಸದ ಸಸಿಕಾಂತ ಸೆಂಥಿಲ್ ಶನಿವಾರ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net