ಅಂಗವಿಕಲರಿಗೆ ನೆರವು ನೀಡಿ

07072020 Raichur State Disabled & Parents Union Appeal
Published on

ರಾಜ್ಯ ವಿಕಲಾಂಗರ ಹಾಗೂ ಪಾಲಕರ ಒಕ್ಕೂಟ ಮನವಿ

ರಾಯಚೂರು: ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವ ಅಂಗವಿಕಲರಿಗೆ ಮಾಸಿಕ 5 ಸಾವಿರ ರೂ. ನೆರವು ನೀಡಲು ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಒತ್ತಾಯಿಸಿದೆ.

ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರ್‌ಗೆ ಮಂಗಳವಾರ ಮನವಿ ಸಲ್ಲಿಸಿತು. ಇತರ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿ, ಅಂಗವಿಕಲರನ್ನು ಕಡೆಗಣಿಸಲಾಗಿದೆ. ಶೇ.1ರಷ್ಟು ಅಂಗವಿಕಲರು ಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿದ್ದು, ಉಳಿದವರು ಅಸಂಘಟಿತ ವಲಯದಲ್ಲಿದ್ದಾರೆ. ಮಾಸಾಶನ ಹೊರತುಪಡಿಸಿ ಬೇರೆ ಸಹಾಯ ಅಂಗವಿಕಲರಿಗೆ ದೊರೆತಿಲ್ಲ ಎಂದು ಮನವಿಯಲ್ಲಿ ನೋಡು ತೋಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net