ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

05072020 Raichur Band
Published on

ವ್ಯಾಪಾರ, ವಹಿವಾಟು ಸಂಪೂರ್ಣ ಸ್ತಬ್ಧ | ಆಟೋ, ಬಸ್ ಸಂಚಾರ ಬಂದ್

ರಾಯಚೂರು: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಜಿಲ್ಲಾದ್ಯಂತ ಭಾನುವಾರ ವ್ಯಾಪಾರ, ವಹಿವಾಟು ಸಂಪೂರ್ಣವಾಗಿ ಬಂದ್ ಆಗಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ಸಾರಿಗೆ ಸಂಸ್ಥೆ ಬಸ್, ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಖಾಸಗಿ ವಾಹನ ಮತ್ತು ಬೈಕ್‌ಗಳ ಓಡಾಟವೂ ಅತೀ ವಿರಳವಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ರಸ್ತೆಗೆ ಇಳಿದ ಬೈಕ್ ಸವಾರರಿಗೆ ಪೊಲೀಸರು ತಿಳಿ ಹೇಳಿ ವಾಪಾಸ್ ಕಳುಹಿಸುವ ದಶ್ಯ ಸಾಮಾನ್ಯವಾಗಿತ್ತು.
ಬಸ್ ಸಂಚಾರ ಸ್ಥಗಿತವಾದ್ದರಿಂದ ಬೆಂಗಳೂರು ಮುಂತಾದೆಡೆಯಿಂದ ಬಂದ ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳಲು ಬಸ್‌ಗಳಿಲ್ಲದ ಕಾರಣ ನಿಲ್ದಾಣದಲ್ಲೇ ಸಣ್ಣ ಮಕ್ಕಳೊಂದಿಗೆ ಕುಳಿತುಕೊಂಡಿದ್ದರು.

ಜಿಲ್ಲಾಡಳಿತ ಅಗತ್ಯ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಿರಾಣಿ, ಹಾಲು, ತರಕಾರಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದರೂ ಪೊಲೀಸರು ತೆರೆದಿದ್ದ ಕಿರಾಣಿ ಅಂಗಡಿಗಳನ್ನು ಮುಚ್ಚಿಸಿದರು. ಮತ್ತೊಂದೆಡೆ ಸದಾ ಜನರಿಂದ ತುಂಬಿರುತ್ತಿದ್ದ ಸರಾಫ್ ಬಜಾರ್, ಬಟ್ಟೆ ಬಜಾರ್ ಹಾಗೂ ಸ್ಟೇಷನ್ ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net