ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಒತ್ತಾಯಿಸಿ ಪ್ರತಿಭಟನೆ

oplus_2
oplus_2
Published on

ರಾಯಚೂರು: ಮೈಕ್ರೋ ಫೈನಾನ್ಸ್, ಸಂಘ ಸಂಸ್ಥೆಗಳು ಹಾಗೂ ಇತರೆ ಫೈನಾನ್ಸ್ ಕಂಪನಿಗಳಿಂದ ತೆಗೆದುಕೊಂಡ ಹಣವನ್ನು ಮರುಪಾವತಿಸಲು ಬಡ್ಡಿ ರಹಿತ 6 ತಿಂಗಳ ಸಮಯಾವಕಾಶ ಕಲ್ಪಿಸಲು ಒತ್ತಾಯಿಸಿ ಸಾರ್ವಜನಿಕ ಹೋರಾಟಗಾರರು ಮತ್ತು ಸಮಾಜ ಸೇವಕರ ವೇದಿಕೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೈಕ್ರೋ ಫೈನಾನ್ಸ್, ಎನ್‌ಜಿಒಗಳು, ಸಂಘ ಸಂಸ್ಥೆಗಳಿಂದ ಪ್ರತಿವಾರ, 15 ದಿನಗಳಿಗೊಮ್ಮೆ ಹಾಗೂ ತಿಂಗಳಿಗೊಮ್ಮೆ ಮಾಸಿಕ ಕಂತಿನ ಮೂಲಕ ಮರುಪಾವತಿ ನೀಡಲು ಸಾಲ ಪಡೆದುಕೊಂಡಿದ್ದು. ಆದರೆ ವ್ಯಾಪಾರಗಳು ನಡೆಯದೇ, ಸಾಲ ವಾಪಸ್ಸು ಪಾವತಿಸಲು ಸಂಕಷ್ಟ ಎದುರಾಗಿದೆ. ಇಂತಹ ಸಮಯದಲ್ಲಿ ಫೈನಾನ್ಸ್ ಕಂಪನಿಗಳ ಏಜೆಂಟರು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮನೆ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಮನೆಯ ಅಂಗಳದಲ್ಲಿ ನಿಂತು ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಜತೆಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಲ ಮರುಪಾವತಿಗೆ 6 ತಿಂಗಳ ಕಾಲಾವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಅಂಬಾಜಿರಾವ್ ಮೈದರಕರ್, ಅಹ್ಮದ್ ಬೇಗ್, ಮಸೂದ್ ಅಲಿ, ಅಕ್ಬರಿ ಖಾನಂ, ಹಾಜಿ ಬೇಗಂ, ಶಬಾನಾ, ಸಲೀಮಾ ಬಾನು, ಶಾಹೀನ್ ಬೇಗಂ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net