ರಾಯಚೂರಲ್ಲಿ ‘ಎಣ್ಣೆ’ ಅಂಗಡಿಗೆ ಕನ್ನ ಹಾಕಿದ ಖದೀಮರು

Raichur Liquor Shop Thieft
Published on

ರಾಯಚೂರು : ನಗರದ ಹೊರವಲಯದ ಅಸ್ಕಿಹಾಳ ಹತ್ತಿರದ ಮದ್ಯದ ಅಂಗಡಿಯ ಹಿಂದಿನ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಮದ್ಯ ಸೋಮವಾರ ತಡರಾತ್ರಿ ಕಳವಾಗಿದೆ.
ವೆಂಕಟೇಶಗೌಡ ಎಂಬುವವರಿಗೆ ಸೇರಿದ ರೇಣುಕಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಹಿಂದಿನ ಬಾಗಿಲು ಮುರಿದು ಒಳಗೆ ಪ್ರವೇಶಿಸಿರುವ ಕಳ್ಳರು ಮದ್ಯದ ಬಾಕ್ಸ್‌ಗಳನ್ನು ದೋಚಿ ಪರಾರಿಯಾಗಿದ್ದು, ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಕಳೆದ ಇಪ್ಪತ್ತು ದಿನಗಳಿಂದ ಮದ್ಯ ದೊರೆಯದೆ ಕಂಗಾಲಾದವರು ಈ ಕೃತ್ಯ ನಡೆಸಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಪಶ್ಚಿಮ ಠಾಣೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net