ಬಸ್‌‌ಗಳಿಗೆ ಕಲ್ಲು ಹೊಡೆದಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು.

IMG_20241121_214510
Published on

ರಾಯಚೂರು: ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ಕಿಡಿಗೇಡಿಗಳ ಗುಂಪೊಂದು ಚಲಿಸುತ್ತಿದ್ದ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಹಟ್ಟಿ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದು, ಉಳಿದ ಮೂರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಗೊಲ್ಲಪಲ್ಲಿ ಬಳಿಯ ದುಮತಿದೊಡ್ಡಿ ಗ್ರಾಮದ ತಿಮ್ಮಣ್ಣ ತಂದೆ ಹನುಮಂತ ಎಂಬ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಉಳಿದ ಆರೋಪಿಗಳಾದ ಅಂಬರೀಶ, ತಿಮಣ್ಣ, ಆಂಜನೇಯ್ಯ ಎಂಬ ಆರೋಪಿಗಳು ಪರಾರಿಯಾಗಿದ್ದಾರೆ.

ನ.18ರಂದು ವಶಕ್ಕೆ ಪಡೆದ ಆರೋಪಿಯ ಅಕ್ಕ ಹಾಗೂ ಮಾವ ಹಾಗೂ ಸಂಬಂಧಿಕರನ್ನು ಬೆಂಗಳೂರಿಗೆ ಕಳಿಸುವ ಸಲುವಾಗಿ ಗುರಗುಂಟಾದಲ್ಲಿ ಬಸ್ ಹತ್ತಿಸಲು ಹೋದಾಗ ಬಸ್ ಫುಲ್ ಆಗಿದ್ದು, ಬಸ್‌ನಿಲ್ಲಿಸದ ಕಾರಣ ಸಿಟ್ಟಿನಲ್ಲಿ ಹಾಗೂ ಕುಡಿದ ಅಮಲಿನಲ್ಲಿ ಈ ಕೃತ್ಯ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಎಂ.ಪುಟ್ಟಮಾದಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net