ಕೊಡಲಿಯಿಂದ ಕೊಚ್ಚಿ ಪತ್ನಿ ಕೊಲೆ

17082022 lng 2
Published on

ಲಿಂಗಸುಗೂರು: ಗುಡದನಾಳ ಗ್ರಾಮದಲ್ಲಿ ಜಟ್ಟೆಪ್ಪ ಭಜಂತ್ರಿ ಎಂಬಾತ ಅನೈತಿಕ ಸಂಬಂಧ ಶಂಕೆಯಿಂದ ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಬುಧವಾರ ಕೊಲೆ ಮಾಡಿದ್ದಾನೆ. ರೇಣುಕಾ ಭಜಂತ್ರಿ (26) ಮೃತೆ. ರೇಣುಕಾ ಮೊಬೈಲ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಜಟ್ಟೆಪ್ಪ ಸಂಶಯಗೊಂಡಿದ್ದ. ಇದರಿಂದಾಗಿ ಕೊಡಲಿಯಿಂದ ಪತ್ನಿಯ ತಲೆ ಮತ್ತು ಕಿವಿಯ ಹಿಂಭಾಗ ಹೊಡೆದು ಕೊಲೆ ಮಾಡಿದ್ದಾನೆ. ಮೃತಳ ಸಂಬಂಧಿ ಚನ್ನಮ್ಮ ನೀಡಿದ ದೂರು ಆಧರಿಸಿ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net