ಜಮೀನು ವಿವಾದಗಳ ಇತ್ಯರ್ಥಕ್ಕೆ ಅನಗತ್ಯ ವಿಳಂಬ: ಎಚ್.ಜಗದೀಶ್

IMG-20241009-WA0012
Published on

ರಾಯಚೂರು: ಭೂಮಿ ಸಂಬಂಧಿತ ತಕರಾರುಗಳನ್ನು ನ್ಯಾಯಾಲಯ ವ್ಯಾಪ್ತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಸಿಗಬೇಕಾಗಿದೆ ಎಂದು ಸೇಠ್ ಚುನಿಲಾಲ್ ಅಮರಚಂದ್ ಬೋಹರಾ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಎಚ್.ಜಗದೀಶ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕೃಷಿ ಭೂಮಿಗೆ ಸಂಬಂಧಿಸಿದ ಪಹಣಿ ತಿದ್ದುಪಡಿ, ಖಾತೆ ಬದಲಾವಣೆ, ಪಹಣಿಗೆ ಹೆಸರು ಸೇರ್ಪಡೆ, ಜಮೀನು ಗಡಿ ವಿವಾದ ಸೇರಿದಂತೆ ಇನ್ನಿತರ ಕಾನೂನು ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕಾರ್ಯವನ್ನು ಕಂದಾಯ ಅಧಿನಿಯಮ 1964ರ ಭಾಗ 11ರ ಪ್ರಕಾರ ಕಂದಾಯ ಇಲಾಖೆಗೆ ನೀಡಿದ್ದು, ಇಲಾಖೆಯ ಅಧಿಕಾರಿಗಳು ಜಮೀನು ವಿವಾದಗಳನ್ನು ಇತ್ಯರ್ಥಪಡಿಸಲು ಅನಗತ್ಯ ವಿಳಂಬ ಮಾಡುತ್ತಾರೆ ಇದರಿಂದ ಸಾಕಷ್ಟು ಪ್ರಕರಣಗಳು ಬಾಕಿ ಉಳಿಯುತ್ತವೆ ಎಂದರು.

ಕೂಡಲೇ ಸರ್ಕಾರ ಭೂ ಕಂದಾಯ ಅಧಿನಿಯಮದಲ್ಲಿರುವ ಭಾಗ 11ಕ್ಕೆ ಸೂಕ್ತ ತಿದ್ದುಪಡಿ ತಂದು, ರೈತರಿಗಾಗುತ್ತಿರುವ ಕಾನೂನು ತೊಂದರೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಭೂಮಿ ವಿವಾದಗಳನ್ನು ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ದೊರೆಯಬೇಕು. ಈ ಬಗ್ಗೆ ಚರ್ಚೆ ಮತ್ತು ಕಾನೂನು ಪರಿಣಿತರ ಸಲಹೆ ಸೂಚನೆಗಳನ್ನು ಪಡೆದು ಸದನದಲ್ಲಿ ಚರ್ಚಿಸಲು ಸರ್ಕಾರ ಮುಂದಾಗಬೇಕು ಎಂದು ಸರ್ಕಾರಕ್ಕೆ ಜಗದೀಶ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ಕೆ.ಪ್ರಹ್ಲಾದ್‌ರಾವ್, ಎಚ್.ದೊಡ್ಡಪ್ಪ, ಎನ್.ಎಸ್ ರಾಜೇಶ, ಮುನ್ನಾಕುಮಾರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net