ಸರ್ಕಾರದಿಂದ ಸುಳ್ಳು ಭರವಸೆಗಳು; ಕೆಎಸ್‌ಆರ್‌ಟಿಸಿ ಯೂನಿಯನ್ ಉಪಾಧ್ಯಕ್ಷ ಆದಿಮೂರ್ತಿ ಆರೋಪ

04092022 raichur ksrtc union meeting
Published on

ಸಾರಿಗೆ ಕಾರ್ಮಿಕರ ಸಮ್ಮೇಳನ

ರಾಯಚೂರು: ಸರ್ಕಾರದ ಅವೈಜ್ಞಾನಿಕ ನೀತಿ, ನಿಯಮಗಳಿಂದ ಸಾರಿಗೆ ಇಲಾಖೆಯ ಕಾರ್ಮಿಕರು ನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಉಪಾಧ್ಯಕ್ಷ ಆದಿಮೂರ್ತಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರಿಗೆ ಕಾರ್ಮಿಕರ 10ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾರಿಗೆ ಕಾರ್ಮಿಕರು ನಿತ್ಯ ಸಮಸ್ಯೆಗಳನ್ನು ಎದುರಿಸುತ್ತ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತ ಬಂದಿದೆ ಎಂದು ದೂರಿದರು.

ಸಂಘಟನೆಯಿಂದ ವೇತನ ಪರಿಷ್ಕರಣೆ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದರೂ ಸಾರಿಗೆ ಕಾರ್ಮಿಕರಿಗೆ ಕೆಲಸಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ. ಇದರಿಂದಾಗಿ ಸಾರಿಗೆ ಕಾರ್ಮಿಕರಿಗೆ ತೊಂದರೆಯಾಗಿದೆ. ಸಂಸ್ಥೆಯಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡಿರುವುದು ಸರಿಯಲ್ಲ ಎಂದು ಆದಿಮೂರ್ತಿ ಹೇಳಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಬಾಷುಮಿಯಾ ಮಾತನಾಡಿ, ರಾಯಚೂರಿನಲ್ಲಿ ಸಾರಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ನಡೆದ ಹೋರಾಟಕ್ಕೆ ಸಾಕಷ್ಟು ಕಾರ್ಮಿಕರ ಹಾಗೂ ವಿವಿಧ ಸಂಘಟನೆಗಳ ಬೆಂಬಲವಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net