ಕಲಾವಿದರನ್ನು ಗುರುತಿಸುವ ಮುಂಡರಗಿಮಠ

23082022 kavital
Published on

ಕವಿತಾಳ: ಪಟ್ಟಣದ ಮುಂಡರಗಿಮಠ ಕುಟುಂಬ ಕಲಾವಿದರಿಗೆ ಆಶ್ರಯದಾತವಾಗಿದೆ ಎಂದು ಸಾಹಿತಿ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಹೇಳಿದರು.

ವೇದಮೂರ್ತಿ ಮಹಾಂತಯ್ಯಸ್ವಾಮಿ ಮುಂಡರಗಿಮಠರ 19ನೇ ಪುಣ್ಯಸ್ಮರಣೆ ನಿಮಿತ್ತ ಮುಂಡರಗಿ ಪ್ರತಿಷ್ಠಾನದಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಹಾಂತ ಪ್ರಶಸ್ತಿ ಸ್ವೀಕರಿಸಿ ಮಂಗಳವಾರ ಮಾತನಾಡಿದರು. ಮಹಾಂತಯ್ಯಸ್ವಾಮಿ ಮುಂಡರಗಿಮಠರ ಪುಣ್ಯ ಸ್ಮರಣೆ ನಿಮಿತ್ತ ಅವರ ಕುಟುಂಬದವರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಮತ್ತು ನಗದು ನೀಡಿ ಪುರಸ್ಕರಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.

ಸಂಗೀತ ಕ್ಷೇತ್ರದ ಸಾಧನೆಗಾಗಿ ಮಲ್ಲಯ್ಯ ಗುಡಿ ಮುದುಗಲ್, ಸೈಯದ್ ಅಲಿ ಪಟೇಲ್, ಶಿವರಾಜ ಶಾಸ್ತ್ರಿ ರಾಂಪೂರ, ಮೌನೇಶ್ವರ ಕುಮಾರ ಎಚ್.ಬಳ್ಳಾರಿ, ಸಾಹಿತ್ಯ ಕ್ಷೇತ್ರದಲ್ಲಿ ರಾಮಣ್ಣ ಹವಳೆ ರಾಯಚೂರು. ಎಸ್.ವಿ. ಪಾಟೀಲ್ ಗುಂಡೂರು, ಅಯ್ಯಪ್ಪ ಹುಡಾ, ರಂಗಭೂಮಿ ಕ್ಷೇತ್ರದಲ್ಲಿ ಎ.ಎನ್. ಸದಾಶಿವಪ್ಪ ರಾಯಚೂರು, ಮಹಾಂತಯ್ಯಸ್ವಾಮಿ ಗೋನವಾರ, ದಿ.ಮಹಾದೇವಪ್ಪ ಸಾಹುಕಾರ , ದಿ.ಇಲ್ಲೂರು ವೆಂಕಟಸ್ವಾಮಿ ಶೆಟ್ಟಿಗೆ ಮಹಾಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಸವಪ್ರಸಾದ ಸ್ವಾಮಿ ಇರಕಲ್, ಸಾಹಿತಿ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಹಿರಿಯ ಪತ್ರಕರ್ತ ಬಸವರಾಜಸ್ವಾಮಿ, ನಿವೃತ್ತ ಉಪನ್ಯಾಸಕ ಕೆ.ಎ.ಪಂಚಾಕ್ಷರಯ್ಯ, ಶಿವಶಂಕರ ವಕೀಲ, ಎಸ್.ಪಿ.ಸಿದ್ದಯ್ಯಸ್ವಾಮಿ, ಭೀಮನಗೌಡ ವಂದ್ಲಿ, ಮರಿಸ್ವಾಮಿ ಬಳ್ಳಾರಿ, ಶೇಖರಪ್ಪ ಹಟ್ಟಿ, ದೇವೇಂದ್ರಕುಮಾರ ಬೆಂಗಳೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net