

ರಾಯಚೂರು: ಕಾಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಅ.11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಗುವುದೆಂದು ಸೂರ್ಯವಂಶ ಕ್ಷತ್ರೀಯ ಕಾಟಿಕ ಸಮಾಜದ ರಾಜ್ಯ ಸಂಚಾಲಕ ಸತ್ಯನಾರಾಯಣ ಕಲ್ಯಾಣಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಮಾಜವು ರಾಜ್ಯದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಹಾಗೂ ಹಿಂದುಳಿದ ಜಾತಿಯಾಗಿದೆ. ಸಾಮಾಜಿಕ ಕಳಂಕ ಹೊತ್ತಿರುವ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತವಾದ ಜಾತಿಯಾಗಿದೆ. ಆದ್ದರಿಂದ ಕಾಟಿಕ ಜಾತಿಯನ್ನು ಸಾಮಾಜಿಕ ನ್ಯಾಯಕ್ಕಾಗಿ ಎಸ್‌ಸಿಗೆ ಸೇರಿಸಬೇಕು. ಅ.11ರಂದು ನವ ಸಂಕಲ್ಪ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು ಅಲ್ಲಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಮಾಜದ ಅಧ್ಯಕ್ಷ ಜಯಂತಲಾಲ ಕಾಂಬ್ಲೇಕರ್, ಪದಾಧಿಕಾರಿಗಳಾದ ತಾನಾಜಿ ಕಲ್ಯಾಣಕರ್, ಶಿವಶಂಕರ ನಿಜಾಮ್ಕರ್, ಸುರೇಶ ಇದ್ದರು.