ಶಿವನಿಗೆ ಪ್ರಿಯವಾದ ಕಾರ್ತಿಕ ಮಾಸ

oplus_2
oplus_2
Published on

ರಾಯಚೂರು: ದೀಪಗಳೆಂದರೇ ಸಾಕ್ಷಾತ್ ಲಕ್ಷ್ಮೀಯ ಸ್ವರೂಪವಾಗಿದ್ದು, ಮನೆ, ದೇವಸ್ಥಾನಗಳಲ್ಲಿ ದೀಪಗಳನ್ನು ಹಚ್ಚುವುದು ಅತ್ಯಂತ ಶ್ರೇಷ್ಠವಾದ ಧಾರ್ಮಿಕ ಕಾರ್ಯವಾಗಿದೆ ಎಂದು ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಡ್ಯಾಡಿ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ರಾತ್ರಿ ಮಾತನಾಡಿ, ಶಿವನಿಗೆ ಪ್ರಿಯವಾದ ಮಾಸವೇ ಈ ಕಾರ್ತಿಕ ಮಾಸ. ದೀಪಗಳನ್ನು ಹಚ್ಚುವುದು ಬಾಳನ್ನು ಬೆಳಗುವ ಹಾಗೂ ಕತ್ತಲೆ ಕಳೆಯುವ ಸಂಕೇತವಾಗಿದೆ.

ಇದೇ ವೇಳೆ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಮಾತನಾಡಿ, ಸಮಿತಿಯ ಸದಸ್ಯರು ಹಾಗೂ ಗಣೇಶ ಮತ್ತು ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನದ ಭಕ್ತರ ಸಹಕಾರದಿಂದ ದಸರಾ ಉತ್ಸವ, ಗಣೇಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಜರುಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರು ದೀಪಗಳನ್ನು ಹಚ್ಚಿ, ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿದರು. ನಂತರ ಗುರುಪುಟ್ಟ ಕಲಾ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎನ್.ಸದಾಶಿವಪ್ಪ, ಸಂಗೀತಗಾರರಾದ ಸೂಗುರೇಶ ಅಸ್ಕಿಹಾಳ, ಅಂಬಯ್ಯ ನುಲಿ ಹಾಗೂ ಅಯ್ಯಪ್ಪ ಪೀಕಳಿಹಾಳಗೆ ಸನ್ಮಾನಿಸಲಾಯಿತು. ಸಂಗೀತ ಕಲಾವಿದರಾದ ಗಂಗಾ, ಸೌಮ್ಯ, ಮಹಾಲಕ್ಷ್ಮೀ, ಪ್ರತಿಭಾ ಗೋನಾಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಗುರುಪುಟ್ಟ ಕಲಾ ಬಳಗದ ಅಧ್ಯಕ್ಷ ಸುಧಾಕರ ಅಸ್ಕಿಹಾಳ, ಭಕ್ತರಾದ ಯಾಪಲದಿನ್ನಿ ಉದಯಕುಮಾರ್ ಸಾಹುಕಾರ, ಬಸವರಾಜ ಸಕ್ರಿ, ಬಂಡಿ ವಿರೂಪನಗೌಡ, ಎಂ.ಎಂ.ಪಾಟೀಲ್, ವೀರಪ್ಪಗೌಡ, ಕಲ್ಮಲಾ ವೆಂಕಟೇಶ್ವರರಾವ್, ಅಂಬರೀಶಪ್ಪ ಯರಮರಸ್, ನೀಲಕಂಠ ಸ್ವಾಮಿ, ಪರಮೇಶ್ವರ ಸಾಲಿಮಠ, ಬಸವರಾಜ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net