ಸದಾಶಿವಪ್ಪ, ಮಲ್ಲಮ್ಮಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ: ಮೂವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ

rajyotsava prashasti raichur 2024
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}
Published on

ರಾಯಚೂರು: ಸಂಗೀತ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿನ ಸೇವೆಗಾಗಿ ಜಿಲ್ಲೆಯ ಇಬ್ಬರು ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದೊರೆತ್ತಿದ್ದು, ಜತೆಗೆ ಸುವರ್ಣ ಮಹೋತ್ಸವ ಪ್ರಶಸ್ತಿಯು ಜಿಲ್ಲೆಯ ಮೂರು ಜನ ಸಾಧಕರಿಗೆ ದೊರೆತಿದೆ.

ಸಂಗೀತ ಕ್ಷೇತ್ರದಲ್ಲಿ ಮಡ್ಡಿ ಪೇಟೆ ನಿವಾಸಿ ಎ.ಎನ್ ಸದಾಶಿಪ್ಪ ಅವರಿಗೆ 2024ರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಕಳೆದ 55 ವರ್ಷಗಳಿಂದ ತಬಲಾ ಕಲಾವಿದರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಶಾಸ್ತ್ರೀಯ ಸಂಗೀತ, ಗಜಲ್, ನಾಟಕಗಳು, ಜನಪದ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಬಲಾ ಬಾರಿಸುತ್ತಾ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವ ಸದಾಶಿವಪ್ಪ ವರಿಗೆ 1999 ರಲ್ಲಿ ರಾಗರಂಗೋತ್ಸವ ಪ್ರಶಸ್ತಿ, 2000ರಲ್ಲಿ ಜನಪದ ಅಕಾಡೆಮಿ ಪ್ರಶಸ್ತಿ, 2001ರಲ್ಲಿ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, 2002 ಬಾಲಭವನ ಕಲ್ಚರ್ ಪ್ರಶಸ್ತಿ, 2014ರಲ್ಲಿ ಡಾ.ರಾಜಕುಮಾರ ಜಿಲ್ಲಾ ಕನ್ನಡ ರತ್ನ ಪ್ರಶಸ್ತಿ ನೀಡಲಾಗಿದ್ದು, ಪ್ರಸ್ತುತ 2024ರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಸಮಾಜ ಸೇವೆಯನ್ನು ಮಾಡುತ್ತಾ ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿದ ಸೂಲಗಿತ್ತಿ ಮಲ್ಲಮ್ಮ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೆರಿಗೆ ಮಾಡಿಸುತ್ತಾ ಸಮಾಜದ ಜನರಿಗೆ ಸೇವೆ ಸಲ್ಲಿಸುತ್ತಿರುವ ಮಲ್ಲಮ್ಮರಿಗೆ 2023ರಲ್ಲಿ ರಾಜ್ಯ ಮಟ್ಟದ ಕಾಯಕ ಕಣ್ಮಣಿ, ಸೂಲಗಿತ್ತಿ(ಸಮಾಜ ಸೇವಾ ಪ್ರಶಸ್ತಿ, ಎಡೆದೊರೆ ಸಾಧನಾ ಪುರಸ್ಕಾರ ಹಾಗೂ 2024ರಲ್ಲಿ ಮಹಾಮಾತಾ ಶ್ರೀಗೌರಿ ಪ್ರಶಸ್ತಿ ಲಭಿಸಿದ್ದು, ವರ ಸಮಾಜ ಸೇವೆಯನ್ನು ಗುರುತಿಸಿ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಿದೆ.

ಸುವರ್ಣ ಮಹೋತ್ಸವ ಪ್ರಶಸ್ತಿ:

ಸುವರ್ಣ ಮಹೋತ್ಸವ ಪ್ರಶಸ್ತಿ‌ ಪುರಸ್ಕೃತ ಅಮರೇಶ ನುಗುಡೋಣಿ ಹಾಗೂ ಬುರ್ರಕಥಾ ಅಯ್ಯಮ್ಮ

ರಾಜ್ಯೋತ್ಸವ ಪ್ರಶಸ್ತಿ ಮಾತ್ರವಲ್ಲದೇ ಈ ಬಾರಿ ಕರ್ನಾಟಕ ಸಂಭ್ರಮ 50ರ ಅಂಗವಾಗಿ ವಿಶೇಷವಾಗಿ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನೂ ರಾಜ್ಯದ ಸಾಧಕರಿಗೆ ನಿಡುತ್ತಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ಅಮರೇಶ ನುಗಡೋಣಿ, ಜಾನಪದ ಕ್ಷೇತ್ರದಲ್ಲಿ ಬುರ‌್ರಕಥಾ ಅಯ್ಯಮ್ಮ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಶಂಕ್ರಮ್ಮ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ನನ್ನ ಸಂಗೀತ ಸೇವೆಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಗೌರವ ನೀಡುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. - ಎ.ಎನ್.ಸದಾಶಿವಪ್ಪ, ತಬಲಾ ಕಲಾವಿದ, ರಾಯಚೂರು ಸಾಹಿತಿಕ ಕ್ಷೇತ್ರದ ನನ್ನ ಸಾಧನೆಯನ್ನು ಗುರುತಿಸಿ ಸರ್ಕಾರ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿಯಾದ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡುತ್ತಿರುವುದು ಸಂತಸ ತಂದಿದೆ. ಇದು ಕೇವಲ ನನಗೆ ದೊರೆತ ಪ್ರಶಸ್ತಿಯಲ್ಲ ಇಡೀ ಜಿಲ್ಲೆಗೆ ದೊರೆತ ಪ್ರಶಸ್ತಿಯಾಗಿದೆ. - ಅಮರೇಶ ನುಗಡೋಣಿ, ಸಾಹಿತಿ, ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net