ಕಲಬುರಗಿಯ ಕಾವ್ಯಶ್ರೀಗೆ ಬರಗೂರು ದತ್ತಿ ಪ್ರಶಸ್ತಿ

270522 Kavyashree Mahagavkar Raichur
ಕಾವ್ಯಾಶ್ರೀ ಮಹಾಗಾಂವಕರ್
Published on

ರಾಯಚೂರು: ದಿ.ರಾಜಲಕ್ಷ್ಮಿ ರಾಮಚಂದ್ರಪ್ಪ ಬರಗೂರು ಹೆಸರಿನಲ್ಲಿ ಮಹಿಳಾ ಸಾಹಿತಿಗಳಿಗೆ ನೀಡಲಾಗುವ ದತ್ತಿ ಪ್ರಶಸ್ತಿಗೆ ಕಲಬುರಗಿಯ ಕಾದಂಬರಿಗಾರ್ತಿ ಕಾವ್ಯಶ್ರೀ ಮಹಾಗಾಂವಕರರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಹೊಸೂರು ತಿಳಿಸಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಡಾ.ಬರಗೂರು ರಾಮಚಂದ್ರಪ್ಪ ನೀಡಿದ ದತ್ತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು. ನಗರದ ಕನ್ನಡ ಭವನದಲ್ಲಿ ಮೇ 29ರಂದು ಬೆಳಗ್ಗೆ 11ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಗಿರಿರಾಜ ಹೊಸಮನಿಯ ಕಾರುಣ್ಯದೊಡಲು, ಡಾ.ಶಶಿಕಾಂತ ಕಾಡ್ಲೂರುರ ಕಲ್ಯಾಣದ ಬೆಳಕು ಕೃತಿಗಳನ್ನು ಬಿಡುಗಡೆ ಮಾಡಲಾಗುವುದು.

ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ಶೀಲಾದಾಸ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಲಬುರಗಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ವಿ.ಕೆಂಚನಗುಡ್ಡ ಕೃತಿಗಳನ್ನು ಬಿಡುಗಡೆ ಮಾಡಲಿದ್ದು, ಪತ್ರಕರ್ತ ವೀರೇಶ ಸೌದ್ರಿ ಕೃತಿಗಳ ಪರಿಚಯ ಮಾಡಲಿದ್ದಾರೆ ಎಂದರು. ಪದಾಧಿಕಾರಿಗಳಾದ ವಿ.ಎನ್.ಅಕ್ಕಿ, ದಾನಮ್ಮ ಸುಭಾಶ್ಚಂದ್ರ, ಶಾಂತಾ ಕುಲಕರ್ಣಿ, ನಾಗಪ್ಪ ಹೊರಪ್ಯಾಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net