ಇಸ್ರೇಲ್ ನಿಂದ ಅಮಾನವೀಯ ದಾಳಿ: ಎಸ್‍ಯುಸಿಐ ಪ್ರತಿಭಟನೆ

IMG-20241007-WA0013
Published on

ರಾಯಚೂರು: ಗಾಜಾ ಲೆಬನಾನ್ ಮೇಲಿನ ಇಸ್ರೇಲ್ ಅಮಾನವೀಯ ದಾಳಿಯನ್ನು ವಿರೋಧಿಸಿ ಎಸ್‌ಯುಸಿಐನಿಂದ ನಗರದ ಡಿಸಿ ಕಚೇರು ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹಜ್ಬೋಲ್ಲಾದ ಪ್ರಧಾನ ಕಚೇರಿ ಮೇಲೆ ಬಂಕರ್ ಬ್ಲಾಸ್ಟಿಂಗ್ ಮೂಲಕ ದಾಳಿ ಮಾಡಿದ ಇಸ್ರೇಲ್, ಕಚೇರಿಯ ನಾಯಕ ನಸ್ರಲ್ಲಾ ಸೇರಿದಂತೆ ಇತರೆ ಕಮಾಂಡರ್‌ಗಳನ್ನು ಕೊಂದು ಹಾಕಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ದದ ಸಾಧ್ಯತೆಗಳನ್ನು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಇಸ್ರೇಲ್ ದಾಳಿಯಿಂದ 500ಕ್ಕೂ ಹೆಚ್ಚು ಜನರು ಮರಣ ಹೊಂದಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಈ ದಾಳಿಯು ಅಮಾನವೀಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಸ್ರೇಲ್ ವಿಶ್ವ ಸಂಸ್ಥೆಯ ಗೊತ್ತುವಳಿಯನ್ನು ಧಿಕ್ಕರಿಸುತ್ತಾ ಬಂದಿದ್ದು, ಭಾರತ ಸರ್ಕಾರ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವನ್ನು ಎತ್ತಿಹಿಡಿಯಬೇಕು. ಇಸ್ರೇಲ್ ನಡೆಸುತ್ತಿರುವು ದಾಳಿಗೆ ಕದನ ವಿರಾಮ ಏರ್ಪಡಬೇಕು. ದಾಳಿಗೊಳಗಾದ ದೇಶಗಳ ನಾಗರಿಕರ ಸಂಕಷ್ಟಗಳು ಕೊನೆಗಾಣಿಸಬೇಕಾಗಿದೆ. ಕೂಡಲೇ ಇಸ್ರೆಲ್ ದಾಳಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಎಸ್ ವೀರೇಶ್, ಚನ್ನಬಸವ ಜಾನೇಕಲ್, ಅಣ್ಣಪ್ಪ, ಮಲ್ಲನಗೌಡ, ಹಯ್ಯಳಪ್ಪ, ವಿನೋದ್‌ಕುಮಾರ್, ಯಲ್ಲಪ್ಪ, ಸರೋಜಾ, ಅಂಬಾಜಿ, ಪ್ರಮೋದ್, ವೀರೇಶಬಾಬು, ವೀರಭದ್ರಯ್ಯ, ಮಹೇಂದ್ರಸಿಂಗ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net