ಯೋಗದಿಂದ ಒತ್ತಡ ನಿಯಂತ್ರಣ ಸಾಧ್ಯ

Raichur Yoga
ರಾಯಚೂರಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೋಗ ದಿನದ ಕಾರ್ಯಕ್ರಮವನ್ನು ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್ ಹಿರೇಮಠ ಉದ್ಘಾಟಿಸಿದರು. ಪ್ರಾಚಾರ್ಯೆ ಡಾ.ಸುಗುಣಾ, ಸೇವಾದಳದ ವಿಭಾಗೀಯ ಸಂಘಟಕ ವಿದ್ಯಾಸಾಗರ ಚಿಣಮಗೇರಿ, ಪ್ರಾಧ್ಯಾಪಕರಾದ ಡಾ.ಸಯಿದಾ ರಶಿದಾ, ಉಮಾದೇವಿ, ರಂಗನಾಥ, ಶರಣಗೌಡ, ಡಾ.ಸುರೇಶ, ನೆಹರು ಯುವಕೇಂದ್ರದ ತಿರುಮಲೇಶ ಇದ್ದರು.
Published on


ರಾಯಚೂರು: ಕೆಲಸದ ಒತ್ತಡದಿಂದಾಗಿ ಜನರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಯೋಗದಿಂದ ಒತ್ತಡವನ್ನು ನಿಯಂತ್ರಿಸಬಹುದಾಗಿದೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಸುಗುಣಾ ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾರತ ಸೇವಾದಳ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್ ಹಿರೇಮಠ ಮಾತನಾಡಿ, ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಯೋಗವನ್ನು ಮಾಡುವ ಜತೆಗೆ ದೈಹಿಕ ಆರೋಗ್ಯವನ್ನು ಕಾಪಾಡುವ ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದೆ ಎಂದರು.

ಸೇವಾದಳದ ವಿಭಾಗೀಯ ಸಂಘಟಕ ವಿದ್ಯಾಸಾಗರ ಚಿಣಮಗೇರಿ ಯೋಗಭ್ಯಾಸದ ಮಾಹಿತಿ ನೀಡಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಡಾ.ಪ್ರಸನ್ನ ಕುಮಾರ, ಪ್ರಾಧ್ಯಾಪಕರಾದ ಡಾ.ಸಯಿದಾ ರಶಿದಾ, ಉಮಾದೇವಿ, ರಂಗನಾಥ, ಶರಣಗೌಡ, ಡಾ.ಸುರೇಶ, ನೆಹರು ಯುವಕೇಂದ್ರದ ತಿರುಮಲೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net