

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ರಾಯಚೂರು: ಮಹಿಳೆಯರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಜತೆಗೆ ಪೌಷ್ಟಿಕ ಆಹಾರದತ್ತ ಕಾಳಜಿ ತೋರಿಸಿದಾಗ ಮಾತ್ರ ಸದೃಢತೆಯ ನವ ಭಾರತದ ಅಭ್ಯುದಯ ಆಗಲಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಐಸಿಎಆರ್ ವಿಜ್ಞಾನ ಕೇಂದ್ರ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಆಶ್ರಯದಲ್ಲಿ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಪೌಷ್ಟಿಕ ಪೋಷಣೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಮಹಿಳೆಗೆ ಹೆಚ್ಚಿನ ಗೌರವ ಇದೆ. ಅದಕ್ಕೆ ತಕ್ಕಂತೆ ಸರ್ಕಾರಗಳು ಯೋಜನೆ ರೂಪಿಸುವ ಜತೆಗೆ ರಾಜಕೀಯವಾಗಿ ಮೀಸಲು ಕಲ್ಪಿಸಿವೆ. ಮೀಸಲಡಿ ಅಧಿಕಾರ ಪಡೆದ ಮಹಿಳೆ ಸ್ವತಂತ್ರವಾಗಿ ಕಾರ್ಯ ನಿರ್ವಹಣೆಗೆ ಪುರುಷ ಪ್ರಧಾನ ಸಮಾಜ ಅವಕಾಶ ನೀಡದೆ ಇರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಸ್ವತಂತ್ರವಾಗಿ ಚರ್ಚಿಸುವ ಅವಕಾಶ ಅವರ ಪಾಲಕರು, ಪತಿಯಂದಿರು, ಸಹೋದರರು ಹಸ್ತಕ್ಷೇಪ ಮಾಡದೆ ಸ್ವಾತಂತ್ರ ಕೋಡಬೇಕಿದೆ ಎಂದರು.
ಎಸ್ಪಿ ಡಾ. ಸಿ.ಬಿ.ವೇದಮೂರ್ತಿ, ಶಾಸಕ ಬಸನಗೌಡ ದದ್ದಲ್, ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಜಯಶ್ರೀ ಚೆನ್ನಾಳ್, ಎಡಿಸಿ ದುರಗೇಶ, ಉಪನ್ಯಾಸಕರಾಗಿ ಆಗಮಿಸಿದ್ದ ಕೆವಿಕೆ ಆಹಾರ ತಜ್ಞೆ ಸಿ.ಅನುಪಮಾ, ಈಶ್ವರೀಯ ವಿವಿ ಸಂಚಾಲಕಿ ಬಿ.ಕೆ. ಸ್ಮೀತಾ ಅಕ್ಕ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿಮಾತನಾಡಿದರು.