ಒಳಮೀಸಲಾತಿ ಜಾರಿಗಾಗಿ ಪ.ಜಾ ವಕೀಲರ ಸಂಘ ಒತ್ತಾಯ

oplus_2
oplus_2
Published on

ರಾಯಚೂರು: ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಕೂಡಲೇ ಜಾರಿಗೊಳಿಸುವಂತೆ ಜಿಲ್ಲಾ ಪರಿಶಿಷ್ಟ ಜಾತಿಗಳ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಕೆ.ನಿತೀಶಗೆ ನಗರದ ಡಿಸಿ ಕಚೇರಿ ಮುಂದೆ ಬುಧವಾರ ಮನವಿ ಸಲ್ಲಿಸಲಾಯಿತು.

ಸವೋಚ್ಚ ನ್ಯಾಯಾಲಯದ ಏಳು ನ್ಯಾಯಾಧೀಶರ ಪೀಠವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂಬ ತೀರ್ಪನ್ನು ಆ.1ರಂದು ನೀಡಿದೆ ಆದರೆ ರಾಜ್ಯ ಸರ್ಕಾರ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

30 ವರ್ಷಗಳ ಸತತ ಹೋರಾಟದ ನಂತರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಸಿಕ್ಕಿದ್ದು, ರಾಜ್ಯ ಸರ್ಕಾರಗಳು ಕಾಲಹರಣ ಮಾಡದೇ ತಾಯ್ತನ ಹಾಗೂ ವಿವೇಕಯುಕ್ತ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗಿ ಮೀಸಲಾತಿ ಜಾರಿಗೊಳಿಸಲು ಮುಂದಾಗಬೇಕು. ಒಳ ಮೀಸಲಾತಿ ಜಾರಿಗೊಳಿಸದೇ ಸರ್ಕಾರ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ನಿರ್ಧಾರವನ್ನು ವಾಪಸ್ ಪಡೆದು ಒಳಮೀಸಲಾತಿ ಜಾರಿಗೊಳಿಸಿ ಹುದ್ದೆಗಳ ಭರ್ತಿಗೆ ಮುಂದಾಗಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಸುದರ್ಶನರೆಡ್ಡಿ, ಕರುಣಾಕರ ಕಟ್ಟಿಮನಿ, ಹೆಚ್.ದೊಡ್ಡಪ್ಪ, ಪಿ.ನರಸಪ್ಪ, ಜೆ.ಪರಶುರಾಮ, ಲಕ್ಷ್ಮಪ್ಪ ಭಂಡಾರಿ, ಪಿ.ಪ್ರಭಾಕರ್, ರಾಮಣ್ಣ, ಆರ್.ಭೀಮಣ್ಣ, ಎಸ್.ಮಾರೆಪ್ಪ, ಚನ್ನಪ್ಪ, ಶಿವಕುಮಾರ ಮ್ಯಾಗಳಮನಿ, ತಾಯಪ್ಪ ಭಂಡಾರಿ, ಸರಸ್ವತಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net