ಸ್ಫೂರ್ತಿಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ -ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು ಸಲಹೆ

201222 Raichur District Level Marathon
ರಾಯಚೂರಿನಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನಿಂದ ಏರ್ಪಡಿಸಿದ್ದ ಮ್ಯಾರಥಾನ್ ಓಟದಲ್ಲಿ ವಿಜೇತರಿಗೆ ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು ಬಹುಮಾನ ವಿತರಿಸಿದರು.
Published on

ರಾಯಚೂರು: ಕ್ರೀಡೆಗಳಲ್ಲಿ ಸ್ಫೂರ್ತಿಯಿಂದ ಪಾಲ್ಗೊಂಡಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಅಸೋಸಿಯೇಷನ್ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮ್ಯಾರಥಾನ್ ಓಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಯುವಕರು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಹೆಸರು ಬರುವಂತೆ ಮಾಡಬೇಕು ಎಂದರು.

ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಮುನ್ನೂರು ಕಾಪು ಸಮಾಜದಿಂದ ಪ್ರತಿವರ್ಷ ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದ್ದು, ಅಥ್ಲೆಟಿಕ್ ಅಸೋಸಿಯೇಷನ್‌ನಿಂದ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಬೇಕು ಎಂದು ಸಲಹೆ ನೀಡಿದರು.

8 ಕಿಮೀ ಓಟದಲ್ಲಿ ದೇವದುರ್ಗ ತಾಲೂಕು ಚಿಂಚೋಡಿ ಗ್ರಾಮದ ಲಿಂಗಣ್ಣ ದೇಸಾಯಿ ಪ್ರಥಮ, ರಾಜಲಬಂಡಾ ಗ್ರಾಮದ ಉಪೇಂದ್ರ ದ್ವಿತೀಯ, ಚಂದ್ರಶೇಖರ ತೃತೀಯ ಬಹುಮಾನ ಪಡೆದರು. 6 ಕಿಮೀ ಓಟದಲ್ಲಿ ಇಡಪನೂರು ಗ್ರಾಮದ ಪರಶುರಾಮ ಪ್ರಥಮ, ರಾಜಲಬಂಡಾ ರಾಜು ದ್ವಿತೀಯ, ತಲಮಾರಿಯ ಈರೇಶ ತೃತೀಯ ಬಹುಮಾನ ಪಡೆದುಕೊಂಡರು.

4 ಕಿಮೀ ಓಟದಲ್ಲಿ ರಾಯಚೂರಿನ ವಿನೋದಕುಮಾರ ಪ್ರಥಮ, ಚನ್ನಬಸವ ದ್ವಿತೀಯ, ರಾಜೀವ್ ತೃತೀಯ ಬಹುಮಾನ ಪಡೆದುಕೊಂಡರು. ಬಾಲಕಿಯರಿಗಾಗಿ ಏರ್ಪಡಿಸಿದ್ದ 1.5 ಕಿಮೀ ಓಟದಲ್ಲಿ ರೇಣುಕಾ ಪ್ರಥಮ, ಲಕ್ಷ್ಮೀ ದ್ವಿತೀಯ, ನಂದಿತಾ ತೃತೀಯ ಬಹುಮಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net