ಸಮಿತಿಗೆ ಸಮುದಾಯದ ಪ್ರತಿನಿಧಿಗಳನ್ನೂ ನೇಮಿಸಿ: ಮಹೇಂದ್ರಕುಮಾರ ಮಿತ್ರ

oplus_2
oplus_2
Published on

ರಾಯಚೂರು: ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ವರ್ಗೀಕರಣಕ್ಕಾಗಿ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚಿಸಲು ಮುಂದಾಗಿದ್ದು, ಏಕಸದಸ್ಯ ಆಯೋಗವಾಗಬಾರದು ಎಂದು ಡಾ.ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಿವೃತ್ತ ನ್ಯಾಯಮೂರ್ತಿಗಳ ಏಕ ಸದಸ್ಯ ಆಯೋಗ ರಚನೆ ಮಾಡಿ ಮೂರು ತಿಂಗಳೊಳಗಾಗಿ ಜನಸಂಖ್ಯೆ ಮಾಹಿತಿ, ಮೀಸಲಾತಿ ಪ್ರಮಾಣ ಹಂಚಿಕೆ ಸೇರಿದಂತೆ ಇತರೆ ದತ್ತಾಂಶಗಳ ಕ್ರೂಡಿಕರಿಸಲು ಕಾಲಾವಕಾಶ ಸಾಲುವುದಿಲ್ಲ. ಇದರಿಂದ ಒಳ ಮೀಸಲಾತಿ ಜಾರಿ ಮತ್ತಷ್ಟು ವಿಳಂಬವಾಗುತ್ತದೆ. ಎಸ್‌ಸಿ ಸಮುದಾಯಗಳು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಗಳಿರುವುದರಿಂದ ಮಾದಿಗ, ಛಲವಾದಿ, ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿದಂತೆ ಇತರೆ ಎಸ್‌ಸಿ ಸಮುದಾಯಗಳ ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ವರದಿಯನ್ನು ಸಿದ್ಧಪಡಿಸುವಂತೆ ಒತ್ತಾಯಿಸಿದರು.

ಇದಲ್ಲದೇ ಆಯೋಗ ರಚನೆಯಾದ ಬಳಿಕ ಸರ್ಕಾರಕ್ಕೆ ಆಯೋಗದಿಂದ ಸಲ್ಲಿಸಲಾಗುವ ವರದಿಯಾನುಸಾರ ಪರಿಶಿಷ್ಟ ಜಾತಿಯ ಸಮುದಾಯಗಳು ಮೀಸಲಾತಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಹಲು ಪೋತಗಲ, ತಾಯಪ್ಪ ಗದಾರ್, ಜೆಗ್ಲಿ ಉರುಕುಮದಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net