ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ನಾಶ

excise dept
Published on

ರಾಯಚೂರು: ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ 2024ರ ಲೋಕಸಭೆ ಚುನಾವಣೆ ವೇಳೆ ಸೀಜ್ ಮಾಡಲಾಗಿದ್ದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ಹಾಗೂ ತಹಸೀಲ್ ಕಚೇರಿಯಿಂದ ಶನಿವಾರ ನಾಶಪಡಿಸಲಾಯಿತು.

ರಾಯಚೂರು ತಾಲೂಕಿನಲ್ಲಿ ಚುನಾವಣೆ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಜಪ್ತಿಪಡಿಸಿಕೊಂಡ 2 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಹಾಗೂ ಅಬಕಾರಿ ವಸ್ತುಗಳನ್ನು ನಗರದ ಹೊರವಲಯದಲ್ಲಿ ವಿಲೇವಾರಿ ಮಾಡಲಾಯಿತು.

63 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 940 ಲೀ. ಮದ್ಯ, 900 ಲೀ.ಸೇಂಧಿ ಹಾಗೂ 48 ಕೆ.ಜಿ ಸಿಎಚ್ ಪೌಡರ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ತಹಸೀಲ್ದಾರ್ ಸುರೇಶ ವರ್ಮಾ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳ ಎದುರು ನಾಶಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net