ಹಾಕಿ ಪಟುಗಳು ಜಿಲ್ಲೆಗೆ ಕೀರ್ತಿ ತನ್ನಿ: ರವೀಂದ್ರ ಜಲ್ದಾರ್

oplus_2
oplus_2
Published on

ರಾಯಚೂರು: ಬಳ್ಳಾರಿಯಲ್ಲಿ ಡಿ.12ರಿಂದ 15ರವರೆಗೆ ನಡೆಯಲಿರುವ ಅಂತರಜಿಲ್ಲಾ ಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಬೇಕೆಂದು ಹಾಕಿ ರಾಯಚೂರು ಸಂಸ್ಥೆಯ ಅಧ್ಯಕ್ಷ ರವೀಂದ್ರ ಜಲ್ದಾರ ಹೇಳಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಹಾಕಿ ಅಭ್ಯಾಸ ಪಂದ್ಯವನ್ನು ಉದ್ದೇಶಿಸಿ ಮಂಗಳವಾರ ಸಂಜೆ ಮಾತನಾಡಿ, ಹಾಕಿ ಕರ್ನಾಟಕ ಹಾಗೂ ಹಾಕಿ ಬಳ್ಳಾರಿ ಸಂಸ್ಥೆಗಳ ವತಿಯಿಂದ ನಡೆಯಲಿರುವ ಪಂದ್ಯಾವಳಿಯಲ್ಲಿ ಜಿಲ್ಲೆಯ ತಂಡ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಕ್ರೀಡಾಕೂಟಕ್ಕೆ ಆಯ್ಕೆಯಾದ ಪಟುಗಳು ಪಂದ್ಯಾವಳಿಯಲ್ಲಿ ಜಯಗಳಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಹನುಮಂತಪ್ಪ ನಾಯಕ ಮಾತನಾಡಿ, ಕ್ರೀಡಾ ಇಲಾಖೆ ಸಹಕಾರದಿಂದ ಪ್ರತಿನಿತ್ಯ ಕ್ರೀಡಾ ಪಟುಗಳು ಅಭ್ಯಾಸ ಮಾಡಿ ಅಭ್ಯಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತರ ಜಿಲ್ಲಾ ಮಟ್ಟದ ಹಾಕಿ ಟೂರ್ನಿಮೆಂಟ್ ಸ್ಪರ್ಧೆಗೆ 14 ವರ್ಷದೊಳಗಿನ 18 ಕ್ರೀಡಾಪಟುಗಳು ಹಾಗೂ ಒಬ್ಬ ಕೋಚ್ ಸೇರಿದಂತೆ 19 ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಡಿ ವೀರೇಶ ನಾಯಕ, ಹಾಕಿ ಸಂಸ್ಥೆಯ ಉಪಾಧ್ಯಕ್ಷರಾದ ರಂಗನಾಥ ನಾಯಕ, ಜಯಪ್ರಕಾಶ ರೆಡ್ಡಿ, ಎಂ.ಮಂಜುನಾಥಸ್ವಾಮಿ, ಜಂಟಿ ಕಾರ್ಯದರ್ಶಿ ತಿರುಮಲ ರೆಡ್ಡಿ, ಖಜಾಂಚಿ ಅರ್ಜುನ ನಾಯಕ, ಪ್ರಮುಖರಾದ ಲಕ್ಷ್ಮಣ, ಸಂದೀಪ್, ಕಿರಣ್, ಭಗತ್‌ಸಿಂಗ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net