ನಗರದಲ್ಲಿ ಹಿಂದು ಮಹಾಗಣಪತಿ ಶೋಭಾಯಾತ್ರೆ: ರವಿಕುಮಾರ

VISWA HINDU PARISHED PRESS MEET (3)
Published on

ರಾಯಚೂರು: ವಿಶ್ವ ಹಿಂದು ಪರಿಷತ್, ಬಜರಂಗದಳ, ರಾಯಚೂರು ಹಿಂದು ಮಹಾಗಣಪತಿ ಉತ್ಸವ ಸಮಿತಿ ಸೇರಿ ಇತರ ಸಂಘಟನೆಗಳ ವತಿಯಿಂದ 21ನೇ ದಿನದ ಹಿಂದು ಮಹಾಗಣಪತಿ ಮೂರ್ತಿಯ ವಿಸರ್ಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ರವಿಕುಮಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಗರದಲ್ಲಿ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾದ ಹಿಂದು ಮಹಾಗಣಪತಿ ಮೂರ್ತಿಯನ್ನು ಸೆ.27ರಂದು ವಿಸರ್ಜನೆಗೊಳಿಸಲಾಗುವುದು. ಅಂದು ಗಂಜ್ ವೃತ್ತದಲ್ಲಿರುವ ರಾಯಚೂರು ಗುಜರಾತಿ ಸಂಘದ ಕಲ್ಯಾಣ ಮಂಟಪದಿಂದ ಖಾಸಬಾವಿವರೆಗೆ ಗಣೇಶ ಮೂರ್ತಿಯ ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿವಿಧ ಕಲಾ ತಂಡಗಳು ಹಾಗೂ ವಾದ್ಯಮೇಳಗಳ ಮೂಲಕ ಗಣೇಶ ಮೂರ್ತಿ ಮೆರವಣಿಗೆ ಮಾಡಲಾಗುತ್ತದೆ. ಹತ್ತು ಸಾವಿರಕ್ಕೂ ಹೆಚ್ಚಿನ ಜನರು ಈ ಶೋಭಾಯಾತ್ರೆಯಲ್ಲಿ ಸೇರುವ ನಿರೀಕ್ಷೆಯಿದೆ ಎಂದರು. ಈ ಸಂದರ್ಭದಲ್ಲಿ ಸುನೀಲ್‌ಕುಮಾರ್, ಗೌತಮ್ ಜೈನ್, ರವಿಕೃಷ್ಣ, ಶರಣಬಸವ, ಚಂದ್ರಶೇಖರ, ಸಾಯಿರಾಮರೆಡ್ಡಿ, ಶಿವಕುಮಾರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net