ಪ್ರತಿಯೊಬ್ಬರ ಹೃದಯದಲ್ಲಿ ದೇಶಭಕ್ತಿ ಮೂಡಲಿ: ಜಿಲ್ಲಾಧಿಕಾರಿ ಕೆ.ನಿತೀಶ್

Had char tiranga
ರಾಯಚೂರಿನ ಡಿಸಿ ಕಚೇರಿ ಎದುರು ಡಿಸಿ ಕೆ.ನಿತೀಶ್ ಹರ್‌ಘರ್ ತಿರಂಗಾ ಅಭಿಯಾನದ ಮ್ಯಾರಥಾನ್ ಓಟಕ್ಕೆ ಬುಧವಾರ ಚಾಲನೆ ನೀಡಿದರು. ಎಡಿಸಿ ಶಿವಪ್ಪ ಯಲ್ಲಪ್ಪ ಭಜಂತ್ರಿ, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಗದೀಶ್ ಗಂಗಣ್ಣನವರು, ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ ಇದ್ದರು.
Published on

ರಾಯಚೂರು: ಪ್ರತಿಯೊಬ್ಬರಲ್ಲಿ ರಾಷ್ಟ್ರಪ್ರೇಮ ಎಂಬುವುದು ಬೆಳೆಯಬೇಕು. ಈ ನಿಟ್ಟಿನಲ್ಲಿ ಹರ್‌ಘರ ತಿರಂಗಾ ಅಭಿಯಾನದಡಿ ಪ್ರತಿ ಮನೆಯ ಮೇಲೂ ರಾಷ್ಟ್ರ ಧ್ವಜವನ್ನು ಹಾರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ನಿತೀಶ ಹೇಳಿದರು.

ನಗರದ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಅಭಿಯಾನದಂಗವಾಗಿ ಮ್ಯಾರಥಾನ್ ಹಾಗೂ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.

ಜನರ ಹೃದಯದಲ್ಲಿ ದೇಶಭಕ್ತಿ ಮೂಡುವಂತಾಗಬೇಕು. ರಾಷ್ಟ್ರದ ಬಗ್ಗೆ ಪ್ರೀತಿಯ ಭಾವನೆ ಪ್ರೇರೇಪಿಸುವುದರ ಸಲುವಾಗಿ ಬೈಕ್ ರ‌್ಯಾಲಿ ಹಾಗೂ ಮ್ಯಾರಾಥಾನ್ ಓಟ ಸ್ಪರ್ಧೆಯನ್ನು ಅಯೋಜಿಸಿದ್ದು, ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಪ್ಪ ಯಲ್ಲಪ್ಪ ಭಜಂತ್ರಿ, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಜಗದೀಶ್ ಗಂಗಣ್ಣನವರು, ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ರೋಟರಿ ಕಬ್ಲ್‌ನ ಅಧ್ಯಕ್ಷ ರವಿಕುಮಾರ ಗಣೆಕಲ್, ನಿರ್ದೇಶಕರಾದ ಎನ್.ಶಿವಶಂಕರ್, ವಿಜಯ ಸಜ್ಜನ್ ಕೇಶವರಾವ್, ಅಮಿತ್ ಪಾಟೀಲ್, ವೆಂಕಟ್ ಸ್ವಾಮಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net