

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ಅನೇಕ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದ್ದು, ರಣಬಿಸಿಲಿನಿಂದ ಕಂಗೆಟ್ಟಿದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಅರ್ಧಗಂಟೆಗೂ ಹೆಚ್ಚು ಸಮಯ ಬಿರುಗಾಳಿ ಸಹಿತ ಸುರಿದ ಮಳೆಗೆ ಇಳೆ ತಂಪಾಗಿದೆ. ತಾಲೂಕಿನ ಹಲವು ಕಡೆಗಳಲ್ಲೂ ಮಳೆಯಾಗಿದೆ. ಮಧ್ಯಾಹ್ನ 2ರ ವರೆಗೆ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಮಧ್ಯಾಹ್ನ 2ರ ನಂತರ ಬಿರುಗಾಳಿಯೊಂದಿಗೆ ಜೋರು ಮಳೆ ಸುರಿಯಿತು. ತುಂತುರು ಮಳೆ ಮುಂದುವರೆದಿದ್ದರಿಂದ ಜನರಿಗೆ ತೊಂದ್ರೆಯಾಯಿತು.