ಜನಸಂಖ್ಯಾ ಸ್ಫೋಟದಿಂದ ನಿರುದ್ಯೋಗ ಸೃಷ್ಟಿ

06092022 raichur Conference of Unemployed Youth
Published on

ರಾಯಚೂರು: ದೇಶದಲ್ಲಿ ದಿನೇದಿನೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯಾ ಸ್ಫೋಟವೇ ಇದಕ್ಕೆ ಕಾರಣ ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಶಾರದಾ ಪಿ ಹುಲಿನಾಯಕ ಹೇಳಿದರು.

ಕನ್ನಡ ಭವನದಲ್ಲಿ ನಿರುದ್ಯೋಗ ಯುವಜನ ಹೋರಾಟ ಸಮಿತಿಯಿಂದ ಮಂಗಳವಾರ ‘ನಿರುದ್ಯೋಗಿ ಯುವಕರ ಜಿಲ್ಲಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆ, ತಂತ್ರಜ್ಞಾನ ಬೆಳವಣಿಗೆ ಹಾಗೂ ಶಿಕ್ಷಣ ವ್ಯವಸ್ಥೆಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ದೇಶದ ಯುವಕರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ. ಕೇಂದ್ರ-ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿಗೆ ಮುಂದಾಗುತ್ತಿಲ್ಲ. ದೇಶ-ರಾಜ್ಯದಲ್ಲಿ ಕೈಗಾರಿಕೆಗಳನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಬೇಕಾಗಿದೆ. ಸೆ.22ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಇದರಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸುವ ಮೂಲಕ ಕಿಚ್ಚು ಪ್ರದರ್ಶಿಸಬೇಕಾಗಿದೆ. ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಯುವ ಸ್ಪಂದನಾ ಯೋಜನೆಯಡಿ ಉದ್ಯೋಗಗಳಿದ್ದು, ಅದನ್ನು ಪಡೆಯುವಂತೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net