

ರಾಯಚೂರು: ಮಲೇಷಿಯಾದಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲೆಯ ಉದ್ಯಮಿದಾರರು ವಾಣಿಜ್ಯೋದ್ಯಮದ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸಲು ಮುಂದಾಗಬೇಕು ಎಂದು ಡಿಸಿ ಕೆ.ನಿತೀಶ್ ಹೇಳಿದರು.
ನಗರದ ಡಿಸಿ ಕಚೇರಿ ಎದುರು ವಾಣಿಜ್ಯೋದ್ಯಮ ಸಂಘದಿಂದ ಹಮ್ಮಿಕೊಂಡಿದ್ದ ಐತಿಹಾಸಿಕ ವ್ಯಾವಹಾರಿಕ ಸಭೆಗಾಗಿ ಮಲೇಷಿಯಾ ಪ್ರವಾಸಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.
ಜಿಲ್ಲೆಯಲ್ಲಿನ ಕೈಗಾರಿಕೆಗಳಿಗೆ ಹೆಚ್ಚಿನ ಬಂಡವಾಳ, ಉದ್ಯೋಗ ಸೃಷ್ಠಿಗೆ ಒತ್ತು ನೀಡಬೇಕು. ಜಿಲ್ಲೆಯ ಅಭಿವೃದ್ಧಿಗೆ ವಾಣಿಜ್ಯೋದ್ಯಮಿಗಳ ಸಹಕಾರ ಅತ್ಯಗತ್ಯವಾಗಿದೆ. ಜಿಲ್ಲೆಯಿಂದ ಇತರೆ ಜಿಲ್ಲೆಗಳಿಗೆ ಗುಳೆ ಹೋಗುವ ಜನರಿಗೆ ಜಿಲ್ಲೆಯಲ್ಲಿಯೇ ಕೆಲಸ ನೀಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಯಂಕಂಚಿ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪ್ರಮುಖರಾದ ಕಮಲ್‌ಕುಮಾರ ಜೈನ್, ತ್ರಿವಿಕ್ರಮ ಜೋಷಿ, ವಿ.ಲಕ್ಷ್ಮೀ ರೆಡ್ಡಿ, ಜಂಬಣ್ಣ ಯಕ್ಲಾಸಪುರ, ಗೌತಮ್ ಗಿನ್ನಾೃ, ನಾಗನಗೌಡ ಹರವಿ ಸೇರಿದಂತೆ ಇತರರಿದ್ದರು.