ಈಜಲು ತೆರಳಿದ್ದ ಮೂವರು ಬಾಲಕಿಯರು, ರಕ್ಷಿಸಲು ತೆರಳಿದ ವ್ಯಕ್ತಿ ನೀರು ಪಾಲು

DEATH 1
Published on

ರಾಯಚೂರು: ನದಿಯಲ್ಲಿ ಈಜಲು ತೆರಳಿದ ರಾಯಚೂರಿನ ಮೂವರು ಬಾಲಕಿಯರು ಸೇರಿ ಓರ್ವ ವ್ಯಕ್ತಿ ನೀರು ಪಾಲಾದ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಸಿದ್ದಪಟ್ಟಣಂನಲ್ಲಿ ಶುಕ್ರವಾರ ಸಂಭವಿಸಿದೆ.

ಮೃತರನ್ನು ಮದಿಹಾ (೧೨), ಫರಿಯಾ(೧೦), ಲೋಹಾ(೧೦) ಹಾಗೂ ಅನ್ವರ್ (೩೫) ಎಂದು ಗುರುತಿಸಲಾಗಿದೆ.
ಕಡಪ ಜಿಲ್ಲೆಯ ಸಂಬಂಧಿಕರ ಮನೆಗೆ ಹೋದ ಬಾಲಕಿಯರು ಸಿದ್ದಪಟ್ಟಣಂ ಬಳಿ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈಜಾಡುವ ವೇಳೆ ಮೂವರು ಬಾಲಕಿಯರು ನೀರು ಪಾಲು ಆಗುತ್ತಿರುವುದನ್ನು ಕಂಡು ಅನ್ವರ್ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಮೂವರು ಬಾಲಕಿಯರು ಸೇರಿದಂತೆ ರಕ್ಷಿಸಲು ತೆರಳಿದ ವ್ಯಕ್ತಿ ಸಹ ನೀರು ಪಾಲಾಗಿದ್ದಾನೆ.

ಮೃತರು ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಬಳಿಯ ಬಡಾವಣೆ ನಿವಾಸಿಗಳಿದ್ದರು. ಸದ್ಯ ಶವಗಳನ್ನು ರಾಯಚೂರಿಗೆ ತೆಗೆದು ಕೊಂಡು ಬರಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net