ಪರೀಕ್ಷೆಗೆ 5,533 ಅಭ್ಯರ್ಥಿಗಳು ಗೈರು

24082020 Raichur Examination
Published on

ರಾಯಚೂರು: ಜಿಲ್ಲೆಯ ವಿವಿಧ 41 ಪರೀಕ್ಷಾ ಕೇಂದ್ರಗಳಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಸೋಮವಾರ ನಡೆದ ಪೂರ್ವಭಾವಿ ಪರೀಕ್ಷೆ ಸುಸೂತ್ರವಾಗಿ ನಡೆದವು.

ನೋಂದಣಿ ಮಾಡಿಸಿಕೊಂಡಿದ್ದ 13,041 ಅಭ್ಯರ್ಥಿಗಳ ಪೈಕಿ 7,508 ಜನ ಪರೀಕ್ಷೆಗೆ ಹಾಜರಾಗಿದ್ದು, 5,533 ಅಭ್ಯರ್ಥಿಗಳು ಗೈರಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ವಿಶೇಷ ಚೇತನ ಅಭ್ಯರ್ಥಿಗಳಿಗಾಗಿ ನಗರದ ಇನ್‌ಫೆಂಟ್ ಜೀಸಸ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ 45 ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 23 ಅಂಧ ವಿದ್ಯಾರ್ಥಿಗಳು ಸಹಾಯಕರ ಸಹಕಾರದೊಂದಿಗೆ ಪರೀಕ್ಷೆ ಬರೆದರು.

ಕರೊನಾ ಸೋಂಕಿತ ಅಭ್ಯರ್ಥಿಗೆ ಯರಮರಸ್‌ನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಪಿಪಿಇ ಕಿಟ್ ಹಾಕಿಕೊಂಡ ಆರೋಗ್ಯ ಸಹಾಯಕ ವೆಂಕಟ್ ರಾಘವ್ ಅಭ್ಯರ್ಥಿ ಪರೀಕ್ಷೆ ಬರೆಯಲು ಬೇಕಾದ ಅನುಕೂಲ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net