

ರಾಯಚೂರು: ಗಾಯತ್ರಿ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಬ್ರಾಹ್ಮಣ ಸಮುದಾಯಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಭರವಸೆ ನೀಡಿದರು.
ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ನೀಡಲಾಗುವ ಪಡಿತರ ಕಿಟ್‌ಗಳನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಭಾನುವಾರ ವಿತರಿಸಿ, ಮಾತನಾಡಿದರು. ಕರೊನಾದಿಂದ ಎಲ್ಲ ವರ್ಗಗಳ ಜನರು ಸಂಕಷ್ಟ ಎದುರಿಸುವಂತಾಗಿದೆ. ಪೌರೋಹಿತ್ಯದಲ್ಲಿ ತೊಡಗಿರುವ ಬ್ರಾಹ್ಮಣರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಅವರಿಗೆ ಮಂಡಳಿ ಸಹಾಯ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಮುಖರಾದ ಪ್ರಕಾಶ ಆಲಂಪಲ್ಲಿ, ತಿರುಮಲರಾವ್, ನರಸಿಂಹಮೂರ್ತಿ ಕುಲಕರ್ಣಿ, ಮೋಹನ್ ದೇವರು, ರಮೇಶ ಕುಲಕರ್ಣಿ ಇತರರಿದ್ದರು.