ಹಿಂದು ಮಹಾಗಣಪತಿ 21ನೇ ದಿನದ ಗಣೇಶ ಮೂರ್ತಿ ವಿಸರ್ಜನೆ: ಅದ್ದೂರಿ ಮೆರವಣಿಗೆ

IMG-20240927-WA0015
Published on

ರಾಯಚೂರು: ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಜಿಲ್ಲಾ ಹಿಂದು ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ 21ನೇ ದಿನದ ವಿಸರ್ಜನೆ ಅಂಗವಾಗಿ ಬೃಹತ್ ಶೋಭಾಯಾತ್ರೆ ನಗರದಲ್ಲಿ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಚಂದ್ರಮೌಳೇಶ್ವರ ವೃತದಲ್ಲಿ
ಚಂದ್ರಮೌಳೇಶ್ವರ ವೃತದಲ್ಲಿ

ನಗರದ ಗಂಜ್ ವೃತ್ತದ ರಾಯಚೂರು ಗುಜರಾತಿ ಸಂಘದಿಂದ ಖಾಸಭಾವಿ ವರೆಗೆ ಗಣೇಶ ಮೂರ್ತಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಸಹಸ್ರಾರು ಜನರು ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಗಣೇಶ ಮೂರ್ತಿ ಜತೆಗೆ ಶ್ರೀರಾಮನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಯುವಕರು ಸ್ಪೀಕರ್ ಗಳಲ್ಲಿ ಹಾಕಿದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಹಾಡಿಗೆ ಕುಣಿದು ಕುಪ್ಪಳಿಸಿದ ಜನ
ಹಾಡಿಗೆ ಕುಣಿದು ಕುಪ್ಪಳಿಸಿದ ಜನ

ಮದ್ಯಾಹ್ನ 3 ಗಂಟೆಯಿಂದ ಆರಂಭವಾದ ಶೋಭಾ ಯಾತ್ರೆ ನಗರದ ಗಂಜ್ ವೃತ್ತ, ಚಂದ್ರಮೌಳೇಶ್ವರ ವೃತ್ತ, ಪಟೇಲ್ ವೃತ್ತ, ಕಲ್ಲಾನೆ ಸೇರಿದಂತೆ ಮುಖ್ಯ ರಸ್ತೆಗಳ ಮೂಲಕ ಖಾಸಭಾವಿಗೆ ತೆರಳಿ ಮೂರ್ತಿ ವಿಸರ್ಜನೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net