ಗಣೇಶ ಮೂರ್ತಿಗಳ ವಿಸರ್ಜನೆ ಅದ್ದೂರಿ

050922 Khasabhavi Ganesha Visarjane
ರಾಯಚೂರಿನ ಖಾಸಬಾವಿಯಲ್ಲಿ ಗಣೇಶ ಮೂರ್ತಿಗಳನ್ನು ಕ್ರೇನ್‌ಗಳ ಸಹಾಯದಿಂದ ವಿಸರ್ಜನೆಗೊಳಿಸಲಾಯಿತು.
Published on

ರಾಯಚೂರು: ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು 5ನೇ ದಿನವಾದ ಭಾನುವಾರ ಜಿಲ್ಲೆಯ ವಿವಿಧೆಡೆ ವಿಜೃಂಭಣೆಯಿಂದ ವಿಸರ್ಜಿಸಲಾಯಿತು. ನಗರದ ಖಾಸಬಾವಿ ಸೇರಿ ಜಿಲ್ಲೆಯ ಹಲವೆಡೆ ಮೂರ್ತಿಗಳ ವಿಸರ್ಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಭಾನುವಾರ ಸಂಜೆ 6 ಗಂಟೆಯಿಂದ ಆರಂಭವಾಗಿ ಸೋಮವಾರ ಬೆಳಗ್ಗೆ 10.30ರವರೆಗೆ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ವಿಸರ್ಜನೆಗಾಗಿ ಖಾಸಬಾವಿ ಮುಂಭಾಗದ ರಸ್ತೆಯಲ್ಲಿ ಬೃಹತ್ ಆಕಾರದ ಗಣೇಶ ಮೂರ್ತಿಗಳು ಸಾಲುಗಟ್ಟಿ ನಿಂತಿದ್ದವು. ನಗರದಲ್ಲಿ 135 ಗಣೇಶ ಮೂರ್ತಿಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1,109 ಗಣೇಶ ಮೂರ್ತಿಗಳು ಭಾನುವಾರ ವಿಸರ್ಜನೆಗೊಂಡವು. ನಗರದ ಪ್ರತಿಷ್ಠಿತ ಗಣೇಶ ಪ್ರತಿಷ್ಠಾಪನಾ ಸಮಿತಿಗಳಾದ ವೀರ ಸಾವರ್ಕರ್ ಗಣೇಶ, ಮಹಾಲಕ್ಷ್ಮಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳು ಸೇರಿದಂತೆ ಹಲವು ಗಣೇಶ ಮೂರ್ತಿಗಳು 5ನೇ ದಿನಕ್ಕೆ ವಿಸರ್ಜನೆಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net