

ರಾಯಚೂರು: ಇಂಧನ ಬೆಲೆ ಏರಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಡಿಸಿ ಕಚೇರಿ ಎದುರು ಪೆಟ್ರೋಲ್ ಬಂಕ್ ಪ್ರತಿಕೃತಿಗೆ ಶ್ರಾದ್ಧ ನೆರವೇರಿಸುವ ಮೂಲಕ ಜೆಡಿಎಸ್ ಮಂಗಳವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರ್‌ಗೆ ಮನವಿ ಸಲ್ಲಿಸಿತು. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿದೆ. ಇತ್ತ ಕರೊನಾ ಕಾಡುತ್ತಿದೆ. ಇಂಥ ವೇಳೆ ಪೆಟ್ರೋಲ್, ಡಿಸೆಲ್ ದರ ಏರಿಕೆಯಿಂದ ಸಂಕಷ್ಟ ಎದುರಾಗಿದೆ. ಕೂಡಲೇ ದರ ಏರಿಕೆ ಕ್ರಮ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮುಖಂಡರಾದ ಯೂಸೂಫ್ ಖಾನ್, ಪವನಕುಮಾರ, ಎನ್.ಶಿವಶಂಕರ, ರಾಮಕೃಷ್ಣ, ನರಸಿಂಹಲು, ಆದಿರಾಜ್, ಆಂಜಿನೇಯ ಯಾದವ್, ಅಲಿಬಾಬು ಇದ್ದರು.