ವಂಚನೆಯಾದ ಹಣ ಭರಿಸಲು ನೋಟಿಸ್ ನೀಡಲಾಗಿದೆ: ಆರ್‌ಡಿಸಿಸಿ ಅಧ್ಯಕ್ಷ ವಿಶ್ವನಾಥ ಪಾಟೀಲ್

oplus_2
oplus_2
Published on

ರಾಯಚೂರು: ಆರ್‌ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸಾಲ ಪಾವತಿ ಮಾಡುವಂತೆ ಯಾವುದೇ ನೋಟೀಸ್ ನೀಡಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಆರ್‌ಡಿಸಿಸಿ ಬ್ಯಾಂಕ್ ಮುದಗಲ್ ಶಾಖೆಯಲ್ಲಿ 2017ರಲ್ಲಿ ವ್ಯವಸ್ಥಾಪಕರಾಗಿ ಶಿವಪತ್ರ ಎಂಬಾತ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯದ ಅವಧಿಯಲ್ಲಿ ಶಿವಪುತ್ರ 2.20 ಕೋಟಿ ರೂ.ಗಳನ್ನು ಬ್ಯಾಂಕಿಗೆ ವಂಚಿಸಿದ್ದ. ವಂಚಿಸಿದ ಹಣ ಹಲವು ಖಾತೆಗಳಿಗೆ ವರ್ಗಾವಣೆಯಾಗಿದೆ. ದುರುಪಯೋಗ ಹಣವನ್ನು ಖಾತೆದಾರರು ಭರಿಸುವಂತೆ ಖಾತೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಅವ್ಯವಹಾರ ನಡೆದ ಕುರಿತು ಸತ್ಯಸತ್ಯತೆಯನ್ನು ಕಂಡುಹಿಡಿಯಲು ಆರ್‌ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನರೇಶ ಕುಮಾರ ಫೆ.16ರಂದು ಆದೇಶವಾಗಿದ್ದು, ಲೆಕ್ಕಪತ್ರಗಳನ್ನು ಸಮನ್ವಯಗೊಳಿಸಿದ ಪ್ರಧಾನ ವ್ಯವಸ್ಥಾಪಕ ನರೇಶ ಹಣ ದುರುಪಯೋಗವಾಗಿರುವ ಬಗ್ಗೆ ಮಾ.26ರಂದು ಪ್ರಧಾನ ಕಾರ್ಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ನಂತರ ಏ.2 ರಂದು ಲೆಕ್ಕ ಪರಿಶೋಧಕ ಪಿ.ಆನಂದ ಲೆಕ್ಕಪರಿಶೋಧನೆ ವಿಧಿ ವಿಜ್ಞಾನಯ ವರದಿಯನ್ನು ಸಲ್ಲಿಸಿದ್ದು, ಈ ವರದಿಯಲ್ಲಿಯೂ ಹಣ ದುರುಪಯೋಗಿರುವುದು ದೃಢಪಟ್ಟಿದೆ. ದುರುಪಯೋಗಪಡಿಸಿಕೊಂಡ ಹಣವನ್ನು ಭರಿಸುವಂತೆ ಬ್ಯಾಂಕಿನ ಹಳೆಯ ಸಿಬ್ಬಂದಿ ಶಿವಪುತ್ರಪ್ಪ, ರಾಜಶೇಖರ ಸೇರಿದಂತೆ 11 ಜನ ಸಿಬ್ಬಂದಿ ಹಾಗೂ 20 ಜನ ಖಾತೆದಾರರಿಗೆ ನೋಟಿಸ್ ನಿಡಲಾಗಿದೆ. ಇದನ್ನು ಹೊರತುಪಡಿಸಿ ಸಾಲ ಪಾವತಿ ಮಾಡುವಂತೆ ಯಾರಿಗೂ ನೋಟಿಸ್ ನೀಡಲಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಪಂಪನಗೌಡ, ರಾಜೇಂದ್ರಪ್ಪ ಶೆಟ್ಟಿ, ಶರಣಮ್ಮ ಯ್ಯಟಿ, ಬಸವರಾಜಗೌಡ ಗಣೇಕಲ್, ವಿಜಯಕುಮಾರ್, ಮಲ್ಲನಗೌಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಿ.ಪಾಟೀಲ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net