ಆಹಾರದ ಅರಿವಿದ್ದವನೇ ಯೋಗಿ

200722 Raichur Kashi Shree Ishtalinga Puja, Pravachana
ರಾಯಚೂರಿನಲ್ಲಿ ಏರ್ಪಡಿಸಿರುವ ಇಷ್ಟಲಿಂಗ ಪೂಜೆ ಮತ್ತು ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ರಾತ್ರಿ ಆಶೀರ್ವಚನ ನೀಡಿದರು.
Published on

ರಾಯಚೂರು: ದೇಹವನ್ನು ಬಿಡುವಾಗ ಯೋಗ ಮಾರ್ಗದಿಂದ ದೇಹ ತ್ಯಾಗ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ರೋಗ ಮಾರ್ಗದಿಂದ ದೇಹ ತ್ಯಾಗ ಮಾಡುತ್ತಿದ್ದೇವೆ. ಅದಕ್ಕೆ ಕಾರಣ ನಮಗೆ ಆಹಾರ ಪದ್ಧತಿಯ ಅರಿವು ಇಲ್ಲದಿರುವುದು ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಇಷ್ಟಲಿಂಗ ಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಮಂಗಳವಾರ ರಾತ್ರಿ ಆಶೀರ್ವಚನ ನೀಡಿ, ಯಾವ ವ್ಯಕ್ತಿಗೆ ಆಹಾರ ಪದ್ಧತಿ ಬಗ್ಗೆ ಅರಿವಿರುತ್ತದೆಯೋ ಅವರು ಯೋಗಿಯಾಗಲು ಸಾಧ್ಯ ಎಂದರು.

ಎಲ್ಲ ಜೀವ ರಾಶಿಗಳು ಆಹಾರವನ್ನು ಸೇವಿಸುತ್ತವೆ. ಆದರೆ ಆಹಾರದಿಂದ ಆರೋಗ್ಯ ಕೆಡುತ್ತಿರುವುದು ಮನುಷ್ಯನಿಗೆ ಮಾತ್ರ. ಮನುಷ್ಯ ಆಹಾರ ಪದ್ಧತಿಯನ್ನು ಸರಿಯಾಗಿ ಅಳವಡಿಸಿಕೊಳ್ಳದಿರುವುದು ಅದಕ್ಕೆ ಕಾರಣ. ಯಾರಿಗೆ ಆಹಾರ ಪದ್ಧತಿಯ ಅರಿವು ಇರುತ್ತದೆ ಅವರಿಗೆ ಮುಕ್ತಿಯ ಚಿಂತೆ ಇರುವುದಿಲ್ಲ ಎಂದು ಹೇಳಿದರು.

ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ನೀಲಗಲ್‌ನ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ತಲೆಂಗಾಣದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಧರ್ಮ ಸಂದೇಶ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net