ನೆರೆ ಸಂತ್ರಸ್ಥರಿಗೆ ಮನೆ ಹಕ್ಕುಪತ್ರ ವಿತರಿಸುವಂತೆ, ದಲಿತ ಸಂಘಟನೆಗಳ ಒಕ್ಕೂಟದಿಂದ ಮನವಿ

oplus_2
oplus_2
Published on

ರಾಯಚೂರು: ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ನೆರೆ ಸಂತ್ರಸ್ತರಿಗೆ ಪುನರ್ ವಸತಿಯೋಜನೆಯಡಿ ಕಲ್ಪಿಸಿದ ಮನೆಗಳ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಡಿಸಿ ಕಚೇರಿ ಆವರಣದಲ್ಲಿ ಕಚೇರಿ ಸ್ಥಾನಿಕ ಅಧಿಕಾರಿ ಪರಶುರಾಮಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಬಾರಿ ಮಳೆಯಿಂದಾಗಿ 2009ರಲ್ಲಿ ನೆರ ಹಾವಳಿ ಉಂಟಾಗಿ, ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ಜನರು ಮನೆಗಳು ಕಳೆದುಕೊಂಡಿದ್ದರು. ಸೂರು ಕಳೆದುಕೊಂಡವರಿಗೆ ಸರಕಾರದಿಂದ ಇದುವರೆಗೂ ಪನರ್ ವಸತಿ ಮನೆಗಳನ್ನು ಹಂಚಿಕೆ ಮಾಡಿಲ್ಲ. ಸರ್ವೆ ಮಾಡಿ ಗುರುತಿಸಿದ ಫಲಾನುಭವಿಗಳನ್ನು ಬಿಟ್ಟು ಹೊಸದಾಗಿ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ನೆರೆ ಸಂತ್ರಸ್ತರ ಮನೆಗಳನ್ನು ಹಂಚಲು ಹುನ್ನಾರ ನಡೆದಿದೆ ಎಂದು ಆರೋಪಿಸಲಾಯಿತು.

ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯಿಂದ ತಯಾರಿಸಲಾದ ಪಟ್ಟಿಯಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ವಿತರಣೆ ಮಾಡುವಂತೆ ಕ್ರಮ ವಹಿಸಬೇಕು, ಸಂಬಂದಪಟ್ಟ ಅಧಿಕಾರಿಗಳು ಕೂಲಕುಂಷವಾಗಿ ಪರಿಶೀಲಿಸಿ ನೈಜ ಫಲಾನುಭವಿಗಳಿಗೆ ಮನೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ಹನುಮಂತಪ್ಪ ಮನ್ನಾಪೂರ, ಆಂಜನೇಯ್ಯ, ಹೊನ್ನಪ್ಪ, ಲಕ್ಷ್ಮಣ, ನೀಲಕಂಠ, ಯಲ್ಲಪ್ಪ, ನರಸಿಂಹಲು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net