

ರಾಯಚೂರು: ರಾಜ್ಯದಲ್ಲಿ ಪಡಿತರ ವಿತರಣೆಗಾಗಿ ಆಹಾರ ಧಾನ್ಯಗಳ ಲಭ್ಯತೆ, ಕಾನೂನು, ಶೇಖರಣಾ ಸಾಮಾರ್ಥ್ಯ, ಇದ್ದರೂ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತಿಲ್ಲ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದಲ್ಲಿ 1.11 ಕೋಟಿ ಬಿಪಿಎಲ್ ಕಾರ್ಡುದಾರರಿದ್ದು, 11 ಲಕ್ಷ ಅಂತ್ಯೋದಯ ಹಾಗೂ 21 ಲಕ್ಷದಷ್ಟು ಎಪಿಎಲ್ ಕಾರ್ಡುದಾರರಿದ್ದರೆ. ಇಷ್ಟು ಜನರಿಗೆ ಪಡಿತರ ಯೋಜನೆಯಡಿ ಆಹಾರ ಒದಗಿಸಲು ವಾರ್ಷಿಕ 30 ಲಕ್ಷ ಟನ್‌ಗಿಂತಲೂ ಹೆಚ್ಚಿನ ಆಹಾರ ಧಾನ್ಯಗಳ ಅವಶ್ಯಕತೆಯಿದೆ. ರಾಜ್ಯದಲ್ಲಿ 60ಲಕ್ಷ ಟನ್‌ಗೂ ಅಧಿಕ ಆಹಾರ ಧಾನ್ಯ ಉತ್ಪಾಧಿಸಲಾಗುತ್ತದೆ ಆದರೆ ಖರೀದಿ ಮಾತ್ರ ಕಡಿಮೆ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ರೈತರಿಂದ ಆಹಾರ ಧಾನ್ಯಗಳ ಖರೀದಿಗೆ ಅಸಡ್ಡೆ ತೋರಲಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಎಫ್‌ಸಿಐ, ಸಿಡಬ್ಲೂೃಸಿ, ಕೆಎಸ್‌ಡಬ್ಲೂೃಸಿ ಸೇರಿದಂತೆ ವಿವಿಧ ಸಂಗ್ರಹಣಾ ಸಂಸ್ಥೆಗಳಲ್ಲಿ 48 ಲಕ್ಷ ಟನ್‌ವರೆಗೆ ಸಂಗ್ರಹಣಾ ಸಾಮರ್ಥ್ಯವಿದೆ. ರಾಜ್ಯ ಸರ್ಕಾರದಿಂದಲೇ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿ ಮಾಡಿದ್ದಲ್ಲಿ ಕೇಂದ್ರದ ಸಾಗಾಣಿಕೆ ವೆಚ್ಚವೂ ಉಳಿಯುತ್ತದೆ. ರಾಜ್ಯದ ರೈತರಿಗೂ ಅನುಕೂಲವಾಗಲಿದೆ ಎಂದರು.
ಕಳೆದ ಸಾಲಿನಂತೆ ಹಿಡುವಳಿಗನುಗುಣವಾಗಿ ಗರಿಷ್ಠ ಮಿತಿಯನ್ನು ವಿಧಿಸಿ ಆಹಾರ ಧಾನ್ಯಗಳನ್ನು ಖರೀದಿ ಮಾಡಬೇಕು. ಆಗ ಮಾತ್ರ ಖರೀದಿ ಕೇಂದ್ರಗಳು ರೈತ ಸ್ನೇಹಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆತ್ಮ ನಿರ್ಭರ ಭಾರತ ಪರಿಕಲ್ಪನೆ ಅನ್ವಯ ಕೆಲಸಗಲಾಗಬೇಕಾದರೆ ಮೊದಲು ರಾಜ್ಯದಲ್ಲಿಯೇ ರೈತರಿಂದ ಆಹಾರ ಉತ್ಪನ್ನಗಳ ಖರೀದಿಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹರವಿ ಶಂಕರಗೌಡ, ರುದ್ರಪ್ಪ, ಆರ್.ಎಸ್.ಪಾಟೀಲ್, ಅಮರೇಶ ಹೊಸಮನಿ, ಶರಣಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.