ರಾಯರ ಏಕಶಿಲಾ ಬೃಂದಾವನಕ್ಕೆ ಜಲದಿಗ್ಬಂಧನದ ಭೀತಿ: ಎಲೆಬಿಚ್ಚಾಲೆ ದೇಗುಲದ ಸುತ್ತಲೂ ನೀರು

Elebichale brundavana
ಎಲೆಬಿಚ್ಚಾಲೆಯ ರಾಯರ ಏಕಶಿಲಾ ಬೃಂದಾವನ ಸುತ್ತಲೂ ನೀರು ಬಂದಿರುವುದು.
Published on

ರಾಯಚೂರು: ಪ್ರಸಿದ್ಧ ಧಾರ್ಮಿಕ ತಾಣವಾದ ರಾಯಚೂರು ತಾಲೂಕಿನ ಎಲೆಬಿಚ್ಚಾಲೆಯ ರಾಯರ ಏಕಶಿಲಾ ವೃಂದಾವನ ದೇಗುಲಕ್ಕೆ ತುಂಗಭದ್ರಾ ನದಿಯ ಪ್ರವಾಹದ ಬಿಸಿ ತಟ್ಟಿದೆ.

ತುಂಗಭದ್ರಾ ಜಲಾಶಯದಿಂದ ಹೊರಹರಿಸಿದ ನೀರು ಬಿಚ್ಚಾಲೆಗೆ ಶನಿವಾರ ತಲುಪಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ರಾಯರ ಏಕಶಿಲಾ ಬೃಂದಾವನ ದರ್ಶನ ಕ್ಕೆ ಅಡಚಣೆ ಉಂಟಾಗಿದೆ.

ಮಂತ್ರಾಲಯಕ್ಕೆ ಶ್ರೀರಾಘವೇಂದ್ರಸ್ವಾಮಿಗಳ ಮೂಲಬೃಂದಾವನದ ದರ್ಶನಕ್ಕೆ ಆಗಮಿಸುವ ಭಕ್ತರು ಎಲೆಬಿಚ್ಚಾಲೆಗೂ ಬರುವುದು ರೂಢಿಯಾಗಿತ್ತು. ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಇದೀಗ ಜಲದಿಗ್ಬಂಧನದ ಬೀತಿ ಎದುರಾಗಿದೆ.

ಭಕ್ತರು ಎಲೆಬಿಚ್ಚಾಲೆಗೆ ಆಗಮಿಸಿದರೂ ರಾಯರ ಏಕಶಿಲಾವೃಂದಾವನ ದೂರದಿಂದಲೇ ದರ್ಶನ ಪಡೆಯುವಂತಾಗಿದೆ. ಬೃದಾವನವನ್ನು ಪ್ರವಾಹದ ನೀರು ಸುತ್ತುವರಿದಿದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ನದಿ ಬಳಿ ತೆರಳದಂತೆ ಎಚ್ಚರಿಕೆ ವಹಿಸುವ ಕಾರ್ಯ ಆಡಳಿತ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net