

ರಾಯಚೂರು: ಜಲಾಲ್ ನಗರದ ಬಡಾವಣೆಯಲ್ಲಿ ಸೋಮವಾರ ಸಿಎಚ್ ಪೌಡರ್ ಸಾಗಿಸುತ್ತಿದ್ದ ಬೋಳಬಂಡಿ ಎಂಬಾತನನ್ನು ಬಂಧಿಸಿ, 8 ಕೆಜಿ ಸಿಎಚ್ ಪೌಡರ್ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಉಪ ಆಯುಕ್ತೆ ಲಕ್ಷ್ಮೀ ನೇತೃತ್ವದ ತಂಡ ಜಲಾಲ್ ನಗರದಲ್ಲಿ ದ್ವಿಚಕ್ರ ವಾಹನವೊಂದನ್ನು ತಡೆದು ತಪಾಸಣೆ ನಡೆಸಿದಾಗ ವಾಹನದಲ್ಲಿ ಸಿಎಚ್ ಪೌಡರ್ ದೊರೆತಿದೆ.
ತೆಲಂಗಾಣದ ಗದ್ವಾಲ್ ಪಟ್ಟಣದಿಂದ ತರಲಾಗಿದೆ ಎಂದು ಆರೋಪಿ ಹೇಳುತ್ತಿದ್ದು, 16 ಸಾವಿರ ಮೌಲ್ಯದ ಸಿಎಚ್ ಪೌಡರ್ ಹಾಗೂ ಅದನ್ನು ಸಾಗಿಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಹನುಮಂತ ಗುತ್ತೆದಾರ, ಕೃಷ್ಣ ಹರಿ, ವೇಣುಗೋಪಾಲ, ನಾಗಣ್ಣ, ಶಶಿಧರ್, ಶಿವಾನಂದ, ನಾಗರಾಜ ಕಾರ್ಯಾಚರಣೆಯಲ್ಲಿದ್ದರು.