

ರಾಯಚೂರು: ಚುನಾವಣೆಯಲ್ಲಿ ಜಾತಿ, ಧರ್ಮಗಳ ಮೂಲಕ ದ್ವೇಷ ಬಿತ್ತುವುದನ್ನು ಬಿಟ್ಟು, ಶಿಕ್ಷಣವನ್ನು ಪ್ರಮುಖ ವಿಷಯವನ್ನಾಗಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಹಕ್ಕೊತ್ತಾಯ ಪತ್ರ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸಮಿತಿ ಸಂಚಾಲಕ ಪ್ರೊ.ನಿರಂಜನಾರಾಧ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಚುನಾವಣೆ ಪ್ರಚಾರಕ್ಕೆ ಬರುವ ರಾಜಕೀಯ ಪಕ್ಷಗಳ ಪ್ರಮುಖರು, ಅಭ್ಯರ್ಥಿಗಳಿಗೆ ಈ ಬಗ್ಗೆ ಪ್ರಶ್ನಿಸುವಂತೆ ಜಾಗೃತಿ ಮೂಡಿಸುವ ಮತ್ತು ಬಜೆಟ್‌ನಲ್ಲಿ ಶೇ.15 ಅನುದಾನ ಶಿಕ್ಷಣಕ್ಕೆ ನೀಡುವಂತೆ ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.