

ರಾಯಚೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಗಳಲ್ಲಿ ವಿವಿಧ ಇಲಾಖೆಗಳ ಮತ್ತು ಶಾಲಾ ಕಾಲೇಜುಗಳಿಂದ ಯೋಗ ಪಟು ಗಳು ಭಾಗವಹಿಸಿದ್ದರು.
ನಗರದ ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗಾಸನ ಸ್ಪರ್ಧೆ ನಡೆಯಿತು. ಪುರುಷ ವಿಭಗಾದಲ್ಲಿ ಇಸ್ಕಾನ್ ದೇವಸ್ಥಾನದ ರಾಹುಲ್‍ಗೆ ಪ್ರಥಮ ಸ್ಥಾನ, ಆಯುಷ್ ಇಲಾಖೆಯ ಗುರುರಾಜ ದ್ವಿತೀಯ ಸ್ಥಾನ ಹಾಗೂ ಬಿ.ಗಾಂಧಿಗೆ ತೃತೀಯ ಸ್ಥಾನ ದೊರೆಯತು.
ಮಹಿಳೆಯರ ವಿಭಾಗದಲ್ಲಿ ಪಂಚಕರ್ಮ ವಿಭಾಗದ ಡಾ.ಪೂಜಾ ಪ್ರಥಮ ಸ್ಥಾನ, ಬಾಲಕೀಯರ ಪದವಿಪೂರ್ವ ಕಾಲೇಜಿನ ಶಕೀಲಾ ದ್ವಿತೀಯ ಸ್ಥಾನ ಹಾಗೂ ಆಯುಷ್ ಇಲಾಖೆಯ ಸಂಗಮ ತೃತೀಯ ಸ್ಥಾನ ಪಡೆದುಕೊಂಡರು. ತೀರ್ಪುಗಾರರಾಗಿ ಯೋಗಪಟು ಡಾ.ತಿಮ್ಮಪ್ಪ ವಡ್ಡೆಪಲ್ಲಿ ಇದ್ದರು.