

ರಾಯಚೂರು: ರಂಗಚೇತನ ರಂಗನಿರಂತರ ಹವ್ಯಾಸಿ ಕಲಾನಾಟ್ಯ ಸಂಘದಿಂದ ಎರಡು ದಿನಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಮಹಾದೇವ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನ.25 ಹಾಗೂ 26ರಂದು ಸಂಜೆ 6 ಗಂಟೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಸಂಗೀತ, ನೃತ್ಯ, ಮತ್ತು ಎರಡು ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ನ.25ರಂದು ಮಗ ಹೋದರೂ ಮಾಂಗಲ್ಯ ಬೇಕು ಎಂಬ ನಾಟಕ ಹಾಗೂ 26ಕ್ಕೆ ಪ್ರೇಮಕ್ಕೆ ದಕ್ಕಿದ ಗೆಲುವು ಎಂಬ ಸಾಮಾಜಿಕ ನಾಟಕಗಳು ಪ್ರದರ್ಶಿಸಲಾಗುತ್ತದೆ. ಮೊದಲ ದಿನ ಕಾರ್ಯಕ್ರಮವನ್ನು ಗ್ರಾಮೀಣ ಶಾಸಕ ಬಸಗೌಡ ದದ್ದಲ್ ನೆರವೇರಿಸಲಿದ್ದಾರೆ. ಎರಡನೇ ದಿನದ ಕಾರ್ಯಕ್ರಮವನ್ನು ಎಪಿಎಂಸಿ ಮಾಜಿ ಅಧ್ಯಕ್ಷ ನರಸನಗೌಡ ಉದ್ಘಾಟಿಸಲಿದ್ದಾರೆ. ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ, ಮೋಹನ, ನರಸಿಂಹ, ದೂಳ್ಳಯ್ಯ ಸೇರಿದಂತೆ ಇತರರಿದ್ದರು.